ಏಕಾಏಕಿ ಆನೆಗಳ ದಾಳಿ: ಬೆಚ್ಚಿಬಿದ್ದ ಜನ

40 elephants group entered anekal

09-01-2018

ಆನೇಕಲ್: ಕರ್ನಾಟಕ–ತಮಿಳುನಾಡು ಗಡಿಭಾಗ ಆನೇಕಲ್ ನಲ್ಲಿ ಸುಮಾರು 40 ಆನೆಗಳ ದಂಡು ಪ್ರತ್ಯಕ್ಷವಾಗಿವೆ. ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳ ಗುಂಪು ಜನರನ್ನು ಬೆಚ್ಚಿಬೀಳಿಸಿವೆ. ತಮಿಳುನಾಡು ಗಡಿ ಭಾಗ ಹೊಸೂರು ಬಳಿಯ ಶಾನಮಾವು ಗ್ರಾಮದಲ್ಲಿ  ಕಾಡಾನೆಗಳು ಕಾಣಿಸಿಕೊಂಡಿವೆ. ಅದಲ್ಲದೇ ಕಾಡಿನಂಚಿನ ಸುತ್ತಮುತ್ತಲ ಗ್ರಾಮಗಳ ತೋಟಗಳ ಮೇಲೆ ದಾಳಿ ಮಾಡಿದ್ದು, ರೈತರು ಬೆಳೆದಿದ್ದ ರಾಗಿ ಬೆಳೆ ರಾಗಿ ಮೆದೆಗಳನ್ನು ತಿಂದ ನಾಶಗೊಳಿಸಿವೆ. ವಿಷಯತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಆನೆಗಳನ್ನು‌ ಕಾಡಿಗಟ್ಟುವ ಕಾರ್ಯಚರಣೆ ನಡೆಸಿದ್ದಾರೆ. ಈ ಭಾಗದಲ್ಲಿ ಪದೇ ಪದೇ ಕಾಡಿನಿಂದ ನಾಡಿಗೆ ಆನೆಗಳು ಬರುತ್ತಿದ್ದು ಈ ಕುರಿತು ಸ್ಥಳೀಯರು ಭಯದಲ್ಲೇ ದಿನ ಕಳೆಯುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Elephant anekal ಅರಣ್ಯ ಸ್ಥಳೀಯರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ