ತೇಲುವ ಮನೆ ಬೇಕೆ?

floating homes the next frontier for urban design?

09-01-2018

ಭಾರತವೂ ಸೇರಿದಂತೆ ಜಗತ್ತಿನ ಹಲವು ನಗರಗಳಲ್ಲಿನ ಜನಸಂಖ್ಯೆ ಮಿತಿಮೀರಿ ಏರುತ್ತಿದೆ. ನಗರದ ಜನತೆಯ ವಾಸ್ತವ್ಯಕ್ಕೆ ಜಾಗವೇ ಇಲ್ಲದಂತಾಗುತ್ತಿದೆ. ಹತ್ತಾರು ಗಗನ ಚುಂಬಿ ಕಟ್ಟಡಗಳು ತಲೆ ಎತ್ತಿದ್ದರೂ ಅಷ್ಟು ಸಾಕಾಗುತ್ತಿಲ್ಲ. ಇದರ ಜೊತೆಗೆ, ಜಗತ್ತಿನ ಹಲವು ದೊಡ್ಡ ನಗರಗಳು, ನದಿ ಮತ್ತು ಸಮುದ್ರಗಳ ದಡದಲ್ಲಿ ತಲೆಯೆತ್ತಿವೆ. ಹವಾಮಾನ ಬದಲಾವಣೆ, ಪ್ರವಾಹ ಮತ್ತು ಸಮುದ್ರ ಮಟ್ಟದಲ್ಲಿ ಏರಿಕೆ ಇತ್ಯಾದಿ ಕಾರಣಗಳಿಂದ ಈ ನಗರಗಳು ಬೆದರಿಕೆ ಎದುರಿಸುತ್ತಿವೆ. ಹೀಗಾಗಿ, ನಗರ ಯೋಜನೆಗಳ ಬಗ್ಗೆ ಚಿಂತಿಸಿದ ತಜ್ಞರು ಮತ್ತು ಬ್ರಿಟಿಷ್ ವಾಸ್ತು ಶಿಲ್ಪಿಗಳು, ನೀರಿನ ಮೇಲೆ ಹೌದು ನೀರಿನ ಮೇಲೆ ಮನೆಗಳನ್ನು ಕಟ್ಟುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದಾರೆ. ಫ್ಲೋಟಿಂಗ್ ಹೋಮ್ಸ್ ಎಂಬ ಹೊಸ ವಿನ್ಯಾಸದ ಮನೆಗಳು, ಭವಿಷ್ಯದಲ್ಲಿ ಕೆಲವು ನಗರಗಳ ವಸತಿ ಸಮಸ್ಯೆಗೆ ಪರಿಹಾರ ನೀಡಬಹುದು.


ಸಂಬಂಧಿತ ಟ್ಯಾಗ್ಗಳು

floating homes largest cities ವಿನ್ಯಾಸ ಭವಿಷ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ