‘ಬಜೆಟ್ ನ 50% ಹಣ ಖರ್ಚು ಮಾಡಿಲ್ಲ’09-01-2018

ಚಿತ್ರದುರ್ಗ: ಚಿತ್ರದುರ್ಗದಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು. ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಪರಿವರ್ತನಾ ಯಾತ್ರೆಯ ಬಹಿರಂಗ ಸಭೆಯಲ್ಲಿ, ಸರ್ಕಾರದ ದುರಾಡಳಿತದ ವರದಿ ಒಪ್ಪಿಸಲು ನಾವು ಬಂದಿದ್ದೇವೆ. ಹಣ, ಹೆಂಡ, ಜಾತಿಯ ವಿಷ ಬೀಜವನ್ನು ಸಿದ್ದರಾಮಯ್ಯ ನವರು ಬಿತ್ತುತ್ತಿದ್ದಾರೆ ಎಂದು ಆರೋಪಿಸಿದರು. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರೂ ಒಂದೇ ಎಂದು ನಾನು ಮುಖ್ಯಮಂತ್ರಿಯಾಗಿದ್ದಾಗ ಭಾವಿಸಿದ್ದೆ. ಭಾಗ್ಯ ಲಕ್ಷ್ಮಿ ಬಾಂಡ್ ಪಡೆಯಲು ಸಿದ್ದರಾಮಯ್ಯ ತಲೆ ತಿರುಕ ಕಾನೂನು ಮಾಡಿದ್ದಾರೆ. ಅನ್ನಭಾಗ್ಯದ ಗೋಧಿ ಎಲ್ಲಿಗೆ ಹೋಗುತ್ತಿದೆ ಎಂದು ಸಿದ್ದರಾಮಯ್ಯ ಅವರನ್ನ ಕೇಳಿ. ಸಾವಿರಾರು ಟನ್ ಅಕ್ಕಿ ಗೋದಿ ಗೋಡೌನ್ ನಲ್ಲಿ ಕೊಳೆಯುತ್ತಿದೆ ಎಂದ ಅವರು. ಜನರ ಪಾಲಿಗೆ ಸರ್ಕಾರ ಬದುಕಿದೆಯೋ ಸತ್ತಿದೆಯೋ ಎಂದು ಟೀಕಿಸಿದ್ದಾರೆ.

ನ್ಯಾಯಬೆಲೆ ಅಂಗಡಿಗಳ ಮುಂದೆ ನರೇಂದ್ರ ಮೋದಿ ಪೋಟೋ ಹಾಕಿ ಇಲ್ಲವಾದ್ರೆ ಅನ್ನಭಾಗ್ಯ ಅಕ್ಕಿ ಕೇಂದ್ರ ಸರ್ಕಾರದ ಯೋಜನೆ ಎಂದು ತಿಳಿಯಲ್ಲ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್ ಸಾಲ ಮನ್ನಾ ಮಾಡಿದ್ದಾರೆ. ಸಿದ್ದರಾಮಯ್ಯ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಲಿ. ಗುಜರಾತ್ನಲ್ಲಿ ನೆಗೆದು ಬಿದ್ರಿ, ಅಚ್ಚೇ ದಿನ್ ಯಾವಾಗ ಬರುತ್ತೆ ಅಂತ ಕೇಳ್ತಿಯಾ? ಸಿದ್ದರಾಮಯ್ಯ ನೀನು ಮನೆಗೆ ಹೋದ ಮೇಲೆ ಅಚ್ಚೇ ದಿನ್  ಬರುತ್ತೆ ಎಂದು ಟಾಂಗ್ ನೀಡಿದ್ದಾರೆ.

ಸಿದ್ದರಾಮಯ್ಯನವರೆ ನಿಮಗೆ ನಾಚಿಕೆ ಆಗಬೇಕು. ಕೊಲೆ, ಅತ್ಯಾಚಾರ, ದೌರ್ಜನ್ಯ, ಸುಲಿಗೆಗಳು ನಡೆದಿವೆ ಎಲ್ಲಿದೆ ಕಾನೂನು ಸುವ್ಯವಸ್ಥೆ. ಜನರೊಂದಿಗೆ ಚೆಲ್ಲಾಟ ಆಡುತ್ತಿದ್ದಿರಾ? ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಪ್ರಧಾನಿಗಳು ಕರೆದ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಸೊಕ್ಕಿನಿಂದ ಹೋಗಲಿಲ್ಲ, ಜನರ ಹಿತ ಸಂಪೂರ್ಣ ಮರೆತಿದ್ದಾರೆ ಎಂದು ಕುಟುಕಿದರು.

ಮದಕರಿ ನಾಯಕನಿಗೆ ದ್ರೋಹ ಮಾಡಿದ ಟಿಪ್ಪು ಜಯಂತಿ ಮಾಡುವ ಸರ್ಕಾರ ಮದಕರಿ ನಾಯಕನ ಜಯಂತಿ ನೆನಪಾಗಲಿಲ್ಲ. ನಿಮಗೆ ನೀರು ಕೊಡ್ತಿನಿ ಎಂದು ಮುಖ್ಯಮಂತ್ರಿ ಹೇಳಿ ಹೋಗಿದ್ರು, ಎಲ್ಲಿ ಕೊಟ್ಟರು ಭದ್ರಾನೀರು. ನಿಮ್ಮ ಯೋಗ್ಯತೆಗೆ ಕಳೆದ ಬಾರಿ ನೀಡಿದ ಬಜೆಟ್ ನ  50% ರಷ್ಟು ಹಣ ಖರ್ಚು ಮಾಡಿಲ್ಲ, ಬರೀ ಸುಳ್ಳು ಹೇಳುತ್ತಿದ್ದೀರಿ ಎಂದು ಆವೇಶದಿಂದ ನುಡಿದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Yeddyurappa parivarthana yathre ವಿಷ ಬೀಜ ಅಚ್ಚೇ ದಿನ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ