‘ಪ್ರತ್ಯೂಷ್’ ಹೊಸ ಸೂಪರ್ ಕಂಪ್ಯೂಟರ್09-01-2018

ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುವ ಭಾರತದ ಹೊಸ ಸೂಪರ್ ಕಂಪ್ಯೂಟರ್ ಅನ್ನು ಪುಣೆಯಲ್ಲಿ ಲೋಕಾರ್ಪಣೆಗೊಳಿಸಲಾಗಿದೆ. ಈ ಸೂಪರ್ ಕಂಪ್ಯೂಟರ್‌ಗೆ ಪ್ರತ್ಯೂಷ್ ಎಂದು ಹೆಸರಿಡಲಾಗಿದೆ. ಪ್ರತ್ಯೂಷ್ ಎಂದರೆ ಸೂರ್ಯ ಎಂದು ಅರ್ಥ. ಪುಣೆಯ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟೆಯೊರಾಲಜಿಯ ಹೈ ಫರ್ಫಾರ್ಮೆನ್ಸ್ ಕಂಪ್ಯೂಟಿಂಗ್ ಫೆಸಿಲಿಟಿಯಲ್ಲಿ ಪ್ರತ್ಯೂಷ್ ಸೂಪರ್ ಕಂಪ್ಯೂಟರ್ ಅನ್ನು ಸ್ಥಾಪಿಸಲಾಗಿದೆ. ಅತ್ಯಂತ ಶಕ್ತಿಶಾಲಿಯಾಗಿರುವ ಈ ಸೂಪರ್ ಕಂಪ್ಯೂಟರ್, ಮಲ್ಟಿ ಪೆಟಾಫ್ಲಾಪ್‌ಗಳನ್ನು ಹೊಂದಿರುತ್ತದೆ. ಪೆಟಾಫ್ಲಾಪ್‌ ಅನ್ನುವುದು, ಈ ಕಂಪ್ಯೂಟರ್‌ನ ಪ್ರೊಸೆಸಿಂಗ್ ಸ್ಪೀಡ್‌ನ ಒಂದು ಅಳತೆ. Flops ಅಂದರೆ ಫ್ಲೋಟಿಂಗ್ ಪಾಯಿಂಟ್ ಆಪರೇಶನ್ಸ್ ಪರ್ ಸೆಕೆಂಡ್. ದೇಶದಲ್ಲಿನ ವಾತಾವರಣ-ಹವಾಮಾನ, ಚಂಡಮಾರುತ, ಮುಂಗಾರು ಮಳೆ, ಪ್ರವಾಹ, ಬರ ಇತ್ಯಾದಿಗಳ ಬಗ್ಗೆ ಕರಾರುವಾಕ್ಕಾದ ಮುನ್ನೆಚರಿಕೆ ನೀಡಲು, ಈ ಪ್ರತ್ಯೂಷ್ ಸೂಪರ್ ಕಂಪ್ಯೂಟರ್ ಅನ್ನು ಬಳಸಿಕೊಳ್ಳಲಾಗುತ್ತದೆ.


ಸಂಬಂಧಿತ ಟ್ಯಾಗ್ಗಳು

'Pratyush' Super-computer ಚಂಡಮಾರುತ ಪ್ರವಾಹ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ