'ಪ್ರತಿಭಟನೆ ನಡೆಸಿದರೆ ನಿರ್ದಾಕ್ಷಿಣ್ಯ ಕ್ರಮ’09-01-2018

ವಿಜಯಪುರ: ವಿಜಯಪುರ ನಗರ ಹಾಗೂ ವಿಜಯಪುರ ತಾಲ್ಲೂಕಿನಲ್ಲಿ 144 ಕಲಂ ಜಾರಿ ಹಿನ್ನೆಲೆ, ವಿಜಯಪುರ ಚಲೋ ಹೆಸರಲ್ಲಿ ಪ್ರತಿಭಟನೆ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದೆಂದು  ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ. ಇಂದು ನಡೆಯಬೇಕಿದ್ದ ವಿಜಯಪುರ ಚಲೋ ಕಾರ್ಯಕ್ರಮ ರದ್ದುಪಡಿಸಲಾಗಿದೆ. ರದ್ದು ಮಾಡಿದ ಬಳಿಕವೂ ಪ್ರತಿಭಟನೆಗೆ ಮುಂದಾದಲ್ಲಿ ಮನವೊಲಿಕೆ ಮಾಡಲಾಗುವುದು, ಅದಕ್ಕೂ ಒಪ್ಪದಿದ್ದರೆ ಅಂಥವರನ್ನು ಬಂಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ವಿಜಯಪುರ ನಗರದಾದ್ಯಂತ 250ಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ಭಾರತೀಯ ಮೀಸಲು ಪಡೆ (ಐ.ಆರ್.ಬಿ) 4 ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳನ್ನು (ಡಿಎಆರ್) ಭದ್ರತೆಗೆ ನಿಯೋಜಿಸಲಾಗಿದೆ. ಅಂಬೇಡ್ಕರ್ ವೃತ್ತದಲ್ಲಿ ಎಸ್ಪಿ, ಹೆಚ್ಚುವರಿ ಎಸ್ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ