ಭಯಹುಟ್ಟಿಸುವಂತಹ ವಾಟ್ಸಾಪ್ ಮೆಸೇಜ್..!

Threatining WhatsApp Message ..!

09-01-2018

ಚಿಕ್ಕಮಗಳೂರು: ಚಿಕ್ಕಮಗಳೂರಿನ ಮೂಡಿಗೆರೆ ನಿವಾಸಿ ಧನ್ಯಶ್ರೀ ಅನ್ಯ ಕೋಮಿನ ಯುವಕನೊಂದಿಗೆ ಒಡಾಡುತ್ತಿದ್ದು, ಇದನ್ನು ವಿರೋಧಿಸಿದ ಬಿಜೆಪಿಯ ಯುವ ಮೋರ್ಚಾದ ಮುಖಂಡ ಸೇರಿದಂತೆ ನಾಲ್ವರು ಧನ್ಯಶ್ರೀ ಮತ್ತವರ ಮನೆಯವರಿಗೆ ಬೆದರಿಕೆ ಹಾಕಿದ್ದು, ಇದರಿಂದ ನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇನ್ನು ಧನ್ಯಶ್ರೀ ಆತ್ಮಹತ್ಯೆ ಬೆನ್ನಲ್ಲೇ ಮತ್ತೊಂದು ವಾರ್ನಿಂಗ್ ಮೆಸೇಜ್ ಅನ್ನು ಭಜರಂಗದಳದ ಕಾಯ೯ಕತ೯ರು ಹರಿಬಿಟ್ಟದ್ದಾರೆ. ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಮೆಸೇಜ್ ಹಾಕಿದ್ದು, ಇದೀಗ ಫುಲ್ ವೈರಲ್ ಆಗಿದೆ. ಹಿಂದೂ ಯುವತಿಯರಿಗೆ ಕೊನೆಯ ಎಚ್ಚರಿಕೆ ಎಂದು ಸಂದೇಶ ನೀಡಿದ್ದು, ಅನ್ಯ ಧರ್ಮದ ಯುವಕರ ಜೊತೆಗೆ ಕಾಣಿಸಿಕೊಂಡರೆ ಧರ್ಮದೇಟು ಗ್ಯಾರಂಟಿ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ನಮಗೆ ಹಿಂದೂ ಧರ್ಮ ಮುಖ್ಯ, ಧರ್ಮ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಮೆಸೇಜ್ ನಲ್ಲಿದೆ. ಮೆಸೇಜ್ ಮೂಡಿಗೆರೆ ಭಜರಂಗದಳದ ಹೆಸರಿನಲ್ಲಿ ರವಾನೆಯಾಗಿದೆ. ಇದರಿಂದ ಅಲ್ಲಿನ ಜನಸಾಮಾನ್ಯರು, ಯುವಕ-ಯುವತಿಯರು ಆತಂಕಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bajrang Dal Love Jihad ಜನಸಾಮಾನ್ಯ ಬೆದರಿಕೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಎಲ್ಲಿಯವರೆಗೂ ಅನ್ಯ ಧರ್ಮೀಯರು ಹಿಂದೂಗಳ ವಿರುದ್ಧ ಕತ್ತಿಮಸೆಯುವುದನ್ನು ಬಿಡುವುದಿಲ್ಲವೋ ಅಲ್ಲಿಯವರೆಗೂ ಈ ತರಹದ ಘಟನೆಗಳು ಸಾಮಾನ್ಯವೇ. ಇದರಲ್ಲಿ ತಪ್ಪೇನಿಲ್ಲ, ಪ್ರತಿಯೊಂದು ಕ್ರೀಯೆಗೆ ತಕ್ಕ ಪ್ರತಿಕ್ರೀಯೆ ಇದ್ದೇ ಇರುತ್ತದೆ!
  • ನೆಲ್ಸನ್ Nelson
  • NA
There's nothing wrong in it. For every action there's an equal and opposite reaction. As long as other casts' try to divide Hindus, such events will happen, and there's no wonder in that. https://halatuhonnu.blogspot.in/p/videos.html
  • ನೆಲ್ಸನ್ Nelson
  • Surya