ಭಾಲ್ಕಿ-ಶಿರಗುಪ್ಪಿ ಬಂದ್

Bhalki-Shiraguppi Bandh

09-01-2018

ಬೀದರ್: ವಿಜಯಪುರದಲ್ಲಿ ನಡೆದ ಬಾಲಕಿ ಅತ್ಯಾಚಾರ ಹಾಗು ಕೊಲೆ ಪ್ರಕರಣಕ್ಕೆ ಸಂಬಧಿಸಿದಂತೆ, ಉತ್ತರ ಕರ್ನಾಟಕದಾದ್ಯಂತ ಒಂದಲ್ಲಾ ಒಂದು ಪ್ರತಿಭಟನೆ, ರ‍್ಯಾಲಿಗಳು ನಡೆಯುತ್ತಲೇ ಇದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ. ಪ್ರತಿಭಟನೆಗಳು ಮುಂದುವರಿದಿದ್ದು ಅತ್ಯಾಚಾರ ಪ್ರಕರಣ, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಸಂವಿಧಾನ ಬದಲಾವಣೆ ಹೇಳಿಕೆ, ಮಹಾರಾಷ್ಟ್ರದ ಭೀಮ ಕೋರೆಗಾಂವ್ ಘಟನೆಗಳನ್ನು ಖಂಡಿಸಿ ಇಂದು ಬೀದರ್ ನಗರ ಮತ್ತು ಭಾಲ್ಕಿ ಪಟ್ಟಣ ಬಂದ್ ಗೆ ವಿವಿಧ ದಲಿತ ಪರ ಸಂಘಟನೆಗಳು ಕರೆ ನೀಡಿವೆ. ಇನ್ನು ದಲಿತ ಸಂಘಟನೆಗಳಿಗೆ ವಿವಿಧ ಕನ್ನಡ ಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಪಟ್ಟಣದಾದ್ಯಂತ ವಾಹನ ಸಂಚಾರ ಸ್ಥಗಿತಗೊಂಡಿದ್ದು, ವ್ಯಾಪಾರಸ್ಥರು ಅಂಗಡಿಗಳನ್ನು ಮುಚ್ಚಿ ಬಂದ್ಗೆ ಬೆಂಬಲಿಸಿದ್ದಾರೆ.

ಅದಲ್ಲದೇ ಭೀಮಾ ಕೋರೆಗಾಂವ್ ಗಲಭೆಯಲ್ಲಿ ದಲಿತ ಯುವಕನೊಬ್ಬ ಸಾವು ಹಿನ್ನೆಲೆ, ಬೆಳಗಾವಿಯ ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಹಾಗೂ ಅಥಣಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮಗಳು ಬಂದ್ ಆಚರಿಸುತ್ತಿವೆ. ಜಿಲ್ಲೆಯ ವಿವಿಧ ದಲಿತಪರ ಸಂಘಟನೆಗಳಿಂದ ಬಂದ್ಗೆ ಕರೆ ನೀಡಿದ್ದು, ಪ್ರತಿಭಟನಾ ರ‍್ಯಾಲಿ ಹಮ್ಮಿಕೊಂಡಿದ್ದಾರೆ. ಬೆಳಗಾವಿ-ಮೀರಜ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡುವ ಸಾಧ್ಯತೆ ಇದ್ದು ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bandh Rally ಗಲಭೆ ಕೋರೆಗಾಂವ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ