ಊಟಿಯಲ್ಲಿ ಸಿರಿ ಉದ್ಯಾನವನ ಲೋಕಾರ್ಪಣೆ

ooty siri park inauguration: s.s mallikarjun

08-01-2018 743

ಬೆಂಗಳೂರು: ರಾಜ್ಯದ ತೋಟಗಾರಿಕೆ ಇಲಾಖೆಯನ್ನು ದೇಶದಲ್ಲಿ ಅಗ್ರಸ್ಥಾನಕ್ಕೆ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಊಟಿಯಲ್ಲಿಂದು ತೋಟಗಾರಿಕೆ ಇಲಾಖೆ 38 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಿರುವ ಕರ್ನಾಟಕ ಸಿರಿ ತೋಟಗಾರಿಕಾ ಉದ್ಯಾನವನ್ನು ಲೋಕಾರ್ಪಣೆ ಮಾಡಿ ಮಾತನಾಡಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಉದ್ಯಾನವನ್ನು ಸರ್ಕಾರ ಅಭಿವೃದ್ಧಿ ಪಡಿಸಿದೆ. ಹೆಚ್ಚಿನ ಮೂಲಭೂತ ಸೌಲಭ್ಯ ಒದಗಿಸಲು ಹೆಚ್ಚುವರಿಯಾಗಿ 5 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದರು. ಒಟ್ಟು 38 ಎಕರೆ ಉದ್ಯಾನವನದಲ್ಲಿ ಟೊಪಿರಿಯಾ, ವೆಜ್ ಗಾರ್ಡ್‍ನ್, ಹಚ್ಚ ಹಸುರಿನ ಹುಲ್ಲುಗಾವಲು ಮತ್ತು ಕಿರು ನೀರಿನ ಸರೋವರಗಳು ಪ್ರಮುಖ ಆಕರ್ಷಣೆಯಾಗಿದೆ ಎಂದು ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.

 

 


ಸಂಬಂಧಿತ ಟ್ಯಾಗ್ಗಳು

s.s mallikharjun Horticulture ಮೂಲಭೂತ ಸರೋವರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ