ಅನಂತಕುಮಾರ್ ಹೆಗಡೆ ವಿರುದ್ಧ ಆಕ್ರೋಶ..!

Dalith organisations protest against ananthkumar hegde

08-01-2018

ಬೆಳಗಾವಿ: ಬೆಳಗಾವಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರಿಗೆ ವಿವಿಧ ದಲಿತ ಸಂಘಟನೆಗಳ ನಾಯಕರು ಕಪ್ಪು ಬಾವುಟ ಪ್ರದರ್ಶನ ಮಾಡುವ ಮೂಲಕ ಪ್ರತಿಭಟನೆ ನಡಸಿದರು. ನಗರದ ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಪೂರ್ವ ನಿಯೋಜಿತ ಕಾರ್ಯಕ್ರಮವಿದ್ದು, ಅನಂತಕುಮಾರ್ ಚನ್ನಮ್ಮ ವೃತ್ತಕ್ಕೆ ಆಗಮಿಸುತ್ತಿದ್ದಂತೆಯೇ ಚನ್ನಮ್ಮ ವೃತ್ತದಲ್ಲಿ ಧುಮುಕಿದ ವಿವಿಧ ದಲಿತ ಸಂಘಟನೆಗಳ ನಾಯಕರು ಹೆಗಡೆ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿ ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ದಲಿತ ಸಂಘಟನೆಗಳ ನಾಯಕರು ಏಕಾಏಕಿ ಚನ್ನಮ್ಮ ವೃತ್ತದಲ್ಲಿ ಧುಮುಕುತ್ತಿದ್ದಂತೆಯೇ ಕಾಡಾ ಕಚೇರಿಯ ಬಳಿ ಪೊಲೀಸರು ಅನಂತಕುಮಾರ್ ಹೆಗಡೆ ಅವರ ಕಾರನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದ ದಲಿತ ಸಂಘಟನೆಗಳ ನಾಯಕರನ್ನು ಬಂಧಿಸಿದ ಬಳಿಕ ಸಚಿವರನ್ನು ಪ್ರತಿಭಟನೆಯ ಜಾಲದಿಂದ ಪಾರು ಮಾಡಿದರು. ಇನ್ನು ದಲಿತ ಸಂಘಟನೆಗಳ ನಾಯಕರು ಧಿಡೀರ್ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದರಿಂದ ಇವರನ್ನು ನಿಯಂತ್ರಿಸಲು ಪೊಲೀಸರು ಪರದಾಡಿದಂತಹ ಘಟನೆ ಸಹ ನಡೆಯಿತು ನಂತರ ಪೊಲೀಸರು ಪ್ರತಿಭಟನಾ ನಿರತರನ್ನು ಬಂಧಿಸಿ ಬಿಡುಗಡೆಗೊಳಿಸಿದರು.‌ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ