‘ಆದಿತ್ಯನಾಥ್ ಗೋಡ್ಸೆ ಅನುಯಾಯಿ’-ಸಿಎಂ08-01-2018

ಉಡುಪಿ: ನಾವು ಶೇಕಡಾ ನೂರಕ್ಕೆ ನೂರು ರೈತರ ಪರ ಇದ್ದೇವೆ, ರೈತರ ಮೇಲೆ ಗೋಲಿಬಾರ್ ಮಾಡಿಸಿದ್ದು ಯಡಿಯೂರಪ್ಪ. ಸಾಲಮನ್ನಾ ಮಾಡಿ ಅಂತ ಯಡಿಯೂರಪ್ಪ ವೀರಾವೇಶದಿಂದ ಮಾತಾಡ್ತಾರೆ, ಆದರೆ ಅವರು ಸಿಎಂ ಆಗಿದ್ದಾಗ ಸಾಲಮನ್ನಾ ಮಾಡಲಿಲ್ಲ ಎಂದು, ಸಿಎಂ ಸಿದ್ದರಾಮಯ್ಯ ಬಿಎಸ್ ವೈ ವಿರುದ್ಧ ಕಿಡಿಕಾರಿದ್ದಾರೆ. ಉಡುಪಿಯ ಬೈಂದೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಯಡಿಯೂರಪ್ಪಗೆ ಒಂದು ನಾಲಿಗೆ ಇಲ್ಲ ಎರಡು ನಾಲಿಗೆ ಇದೆ. ಅವರು ಅವತ್ತೊಂದು ಹೇಳುತ್ತಾರೆ ಇವತ್ತೊಂದು ಹೇಳುತ್ತಾರೆ, ಪರಿವರ್ತನೆ ಆಗಬೇಕಾದವರು ಬಿಜೆಪಿ ನಾಯಕರು ಎಂದರು.

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನಿನ್ನೆ ಬೆಂಗಳೂರಿನಲ್ಲಿ ಹಿಂದುತ್ವದ ಭಾಷಣ ಮಾಡಿ ನನ್ನನ್ನು ಟೀಕೆ ಮಾಡಿದರು, ಹೌದು ನಾನು ಹಿಂದು, ನಮ್ಮದು ಮನುಷ್ಯತ್ವ ಇರುವ ಹಿಂದುತ್ವ. ಯೋಗಿ ಆದಿತ್ಯನಾಥ್ ಗೋಡ್ಸೆ ಅನುಯಾಯಿ, ಇವರಿಂದ ನಾವು ಹಿಂದುತ್ವದ ಪಾಠ ಕಲಿಯಬೇಕಾ? ನಮ್ಮ ಮನಸಿನಲ್ಲಿ, ವ್ಯವಹಾರದಲ್ಲಿ ಹಿಂದುತ್ವ ಇರಬೇಕು, ಬಿಜೆಪಿಯವರಿಗೆ ಇತಿಹಾಸ ಗೊತ್ತಿಲ್ಲ ಎಂದು ಟೀಕಿಸಿದರು.

 

 


ಸಂಬಂಧಿತ ಟ್ಯಾಗ್ಗಳು

siddaramaiah History ಹಿಂದುತ್ವ ವ್ಯವಹಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ