ಬದುಕಿದ್ದ ವ್ಯಕ್ತಿಯನ್ನೇ ಶವಾಗಾರದಲ್ಲಿಟ್ಟ ವೈದ್ಯರು

Hubli kims doctors irresponsible a man died in hospital

08-01-2018

ಹುಬ್ಬಳ್ಳಿ: ಬದುಕಿದ್ದ ವ್ಯಕ್ತಿಯನ್ನೇ ಶವಾಗಾರದಲ್ಲಿಟ್ಟ ಕಿಮ್ಸ್ ವೈದ್ಯರು ಮಹಾ ಎಡವಟ್ಟು ಮಾಡಿದ್ದಾರೆ. ಈ ಘಟನೆಯು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಹುಬ್ಬಳ್ಳಿಯ ಆನಂದ ನಗರ ನಿವಾಸಿ ಪ್ರವೀಣ್ (23) ಎಂಬಾತ ಕಾರು ಅಪಘಾತದಲ್ಲಿ ಗಾಯಗೊಂಡಿದ್ದು, ಹುಬ್ಬಳ್ಳಿ ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ಸತತ 7 ಘಂಟೆಗಳ ಕಾಲ ಬದುಕಿದ್ದಾಗಲೇ ಶವಾಗಾರದಲ್ಲಿ ಪ್ರವೀಣ್ ನನ್ನು ಇಟ್ಟಿದ್ದಾರೆ. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಪ್ರವೀಣ್. ರಾತ್ರಿ 8 ಗಂಟೆಗೆ ಕಿಮ್ಸ್ ಗೆ ದಾಖಲಿಸಲಾಗಿತ್ತು. ಬೆಳಗಿನಜಾವ 3 ಗಂಟೆ ಸುಮಾರಿಗೆ ಸತ್ತಿದ್ದಾನೆ ಎಂದ ವೈದ್ಯರು ಶವಗಾರಕ್ಕೆ ಸಾಗಿಸಿದ್ದರು.

ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಮರಣೋತ್ತರ ಪರೀಕ್ಷೆ ನಡೆಸುವಾಗ ಪ್ರವೀಣ್ ಬದುಕಿರುವ ಸತ್ಯ ಬಯಲಾಗಿದೆ. ತಕ್ಷಣ ಕಿಮ್ಸ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಪ್ರವೀಣ್ ನನ್ನು  ಪೋಷಕರು ಸಾಗಿಸಿದ್ದಾರೆ. ಇನ್ನು ಖಾಸಗಿ ಆಸ್ಪತ್ರೆಯಲ್ಲಿ 20 ನಿಮಿಷಗಳ ಹಿಂದೆ ಸತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಕಿಮ್ಸ್ ಆಸ್ಪತ್ರೆಯ ವೈದ್ಯರ ಮಹಾ ಎಡವಟ್ಟಿಗೆ  ಮೃತ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಗೆ ದಾಖಲಾದಾಗಲೇ ಸೂಕ್ತ ಚಿಕಿತ್ಸೆ ನೀಡಿದ್ದರೇ ಪ್ರವೀಣ್ ಬದುಕುಳಿಯುತ್ತಿದ್ದ ಎಂದು, ನನ್ನ ಮಗನ ಸಾವಿಗೆ ಕಿಮ್ಸ್ ವೈದ್ಯರೇ ಕಾರಣ ಎಂದು ಪ್ರವೀಣ್ ಪೊಷಕರು ಆರೋಪಿಸಿದ್ದಾರೆ. 

 


ಸಂಬಂಧಿತ ಟ್ಯಾಗ್ಗಳು

kims Hubballi ಶವಾಗಾರ ಪರೀಕ್ಷೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ