ಬೈಕ್ ಅಪಘಾತ ವಿದ್ಯಾರ್ಥಿ ಸಾವು

Bengaluru: A puc student died in accident

08-01-2018

ಬೆಂಗಳೂರು: ಎದುರಿನಿಂದ ವೇಗವಾಗಿ ಬಂದ ಮಾರುತಿ ವ್ಯಾನ್ ಡಿಕ್ಕಿ ಹೊಡೆದು ಬೈಕ್ ನಲ್ಲಿ ಹೋಗುತ್ತಿದ್ದ ಪಿಯುಸಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ದುರ್ಘಟನೆ ನೆನ್ನೆ ರಾತ್ರಿ ಯಲಹಂಕದ ದೊಡ್ಡ ಬೆಟ್ಟಹಳ್ಳಿ ಮುಖ್ಯ ರಸ್ತೆಯಲ್ಲಿ ನಡೆದಿದೆ. ಬ್ಯಾಲ ಕೆರೆಯ ಶಬರಿನಾಥ್ (18 ವರ್ಷ) ಮೃತ ವಿದ್ಯಾರ್ಥಿಯಾಗಿದ್ದಾನೆ. ಶೇಷಾದ್ರಿಪುರಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಶಬರಿನಾಥ್ ರಾತ್ರಿ 7.25ರ ವೇಳೆ ದೊಡ್ಡ ಬೆಟ್ಟಹಳ್ಳಿ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದು ವ್ಯಾನ್ ಡಿಕ್ಕಿಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಶಬರಿನಾಥ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿರುವ ಯಲಹಂಕ ಸಂಚಾರ ಪೊಲೀಸರು ವ್ಯಾನ್ ಚಾಲಕನನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.

ನಗರದ ಇನ್ನೊಂದೆಡೆ ಈಜೀಪುರದ 14ನೇ ಕ್ರಾಸ್‍ನ ರಾಘವ್ (52) ಎಂಬುವರು ಕೌಟುಂಬಿಕ ಕಲಹದಿಂದ ನೇಣಿಗೆ ಶರಣಾಗಿರುವ ಘಟನೆ ನೆನ್ನೆ ರಾತ್ರಿ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ರಾಘವ್ ನೇಣಿಗೆ ಶರಣಾಗಿದ್ದು, ಪ್ರಕರಣ ದಾಖಲಿಸಿರುವ ವಿವೇಕ್ ನಗರದ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Accident PUC ವಿದ್ಯಾರ್ಥಿ ದುರ್ಘಟನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ