‘ಬಾರ್ ಮಾಲೀಕನ ವಿರುದ್ಧ ಎಫ್ಐಆರ್’08-01-2018

ಬೆಂಗಳೂರು: ಕಲಾಸಿಪಾಳ್ಯದ ಕೈಲಾಶ್ ಬಾರ್ ಅಂಡ್ ರೆಸ್ಟೋರೆಂಟ್‍ನಲ್ಲಿನ ಅಗ್ನಿ ಆಕಸ್ಮಿಕದಿಂದ ಐವರು ಸಜೀವ ದಹನವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರ್ ಮಾಲೀಕ ಸೇರಿ ಇಬ್ಬರ ಮೇಲೆ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್ ತಿಳಿಸಿದ್ದಾರೆ.

ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಈ ಎಫ್‍ಐಆರ್ ದಾಖಲಾಗಿದೆ. ಸೋಮಶೇಖರ್ ಎಂಬಾತ ಬಾರ್ ನಡೆಸುತ್ತಿದ್ದು  ಬಾರ್ ನ ಲೈಸೆನ್ಸ್ ಪ್ರಭುಶಂಕರ್ ಎಂಬುವರ ಹೆಸರಲ್ಲಿದೆ. ಅನಾರೋಗ್ಯದ ಕಾರಣ ಪ್ರಭುಶಂಕರ್ ಬಾರ್ ನೋಡಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸೋಮಶೇಖರ್ ಎಲ್ಲ ಉಸ್ತುವಾರಿಯನ್ನೂ ನೋಡಿಕೊಳ್ಳುತ್ತಿದ್ದ. ಬಾರ್‍ ನಲ್ಲಿ ಅಗ್ನಿಶಾಮಕ ಮಾರ್ಗಸೂಚಿಗಳನ್ನು ಅಳವಡಿಸದ ಆರೋಪ ಮತ್ತು ನಿರ್ಲಕ್ಷ್ಯದಿಂದ ಐವರನ್ನು ಬಲಿಯಾಗಿದ್ದು, ಈ ಸಂಬಂಧ ಸೋಮಶೇಖರ್ ಮತ್ತು ಪ್ರಭುಶಂಕರ್ ಈ ಇಬ್ಬರ ವಿರುದ್ಧವೂ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Fir Restaurant ಅಗ್ನಿಶಾಮಕ ಸಜೀವ ದಹನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ