‘ಗಲಭೆ ಎಬ್ಬಿಸುವುದೇ ಬಿಜೆಪಿ ಸಿದ್ಧಾಂತ’08-01-2018

ಬೆಂಗಳೂರು: ದೀಪಕ್ ರಾವ್ ಹತ್ಯೆ ಕುರಿತ ಹೆಚ್.ಡಿ.ಕುಮಾರಸ್ವಾಮಿ ಆರೋಪದ ಕುರಿತ ಪ್ರತಿಕ್ರಿಯಿಸಿದ ಗೃಹ ಸಚಿವ ರಾಮಲಿಂಗಾರೆಡ್ಡಿ, ಹತ್ಯೆ ಆರೋಪಿಗಳ ಬಂಧನ ಆಗಿದೆ. ಯಾವ ಕಾರಣಕ್ಕೆ ಕೊಲೆ ಆಗಿದೆ ಎಂದು ಇನ್ನೆರಡು ದಿನಗಳಲ್ಲಿ ತಿಳಿಯುತ್ತದೆ ಎಂದು ಹೇಳಿದ್ದಾರೆ. ವಿಕಾಸಸೌಧದಲ್ಲಿ ಮಾತನಾಡಿದ ಅವರು, ಕೊಲೆಯಲ್ಲಿ ಕಾರ್ಪೋರೇಟರ ಕೈವಾಡ ಆರೋಪ ಹಿನ್ನೆಲೆ, ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ನಾನು ಗೃಹ ಸಚಿವನಾದ ಮೇಲೆ ಎರಡು ಕೊಲೆ ಆಗಿದೆ. ಪರೇಶ್ ಯಾವ ಪಕ್ಷಕ್ಕೂ ಸೇರಿದವನಲ್ಲ  ಎಂದು ಅವರ ತಂದೆಯೇ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಆದರೆ ಶೋಭಾ ಕರಂದ್ಲಾಜೆ ತಮ್ಮ ಪಕ್ಷಕ್ಕೆ ಸೇರಿದವರೆಂದು ಹೇಳಿ, ಜನರನ್ನು ರೊಚ್ಚಿಗೆಬ್ಬಿಸುತ್ತಿದ್ದಾರೆ, ಇದನ್ನು ತಾರ್ಕಿಕ ಅಂತ್ಯಕ್ಕ ತರಲು ರಾಜಕೀಯ ಪಕ್ಷಗಳ ಇಚ್ಛಾಶಕ್ತಿ ಇರಬೇಕು ಎಂದರು. ಸಾಧನೆ ಮತ್ತು ಪ್ರಣಾಳಿಕೆ ಮುಂದಿಟ್ಟು ಜನರ ಬಳಿಗೆ ಹೋಗಬೇಕು, ಗಲಭೆ ಎಬ್ಬಿಸೋದೆ ಬಿಜೆಪಿ ಸಿದ್ಧಾಂತ ಆಗಿದೆ, ಒಂದು ತತ್ವಕ್ಕೆ ಜೋತು ಬಿದ್ದಿದ್ದಾರೆ ಎಂದು ಕುಟುಕಿದ್ದಾರೆ. ಬಿಜೆಪಿಯ ರಾಷ್ಟ್ರೀಯ ನಾಯಕರು ಹೇಳಿದಂತೆ ಇವರು ಮಾಡುತ್ತಿದ್ದಾರೆ, ಯೋಗಿ ಆದಿತ್ಯನಾಥ್ ಅವರ ರಾಜ್ಯದಲ್ಲಿ ಅರಾಜಕತೆ ತಾಂಡವ ಆಡುತ್ತಿದೆ, ಆದರೆ ಇಲ್ಲಿಗೆ ಅವರನ್ನು ಬಿಜೆಪಿ ಕರೆತರುತ್ತಿದೆ ಎಂದು ಕಿಡಿಕಾರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Ramalinga Reddy H.D.Kumaraswamy ಕೈವಾಡ ಇಚ್ಛಾಶಕ್ತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ