ಸಿದ್ದರಾಮಯ್ಯರನ್ನು ಹೊಗಳಿದ ಫರ್ನಾಂಡಿಸ್08-01-2018

ಉಡುಪಿ: ಉಡುಪಿಯ ಬೈಂದೂರುನಲ್ಲಿ ನಡೆಯುತ್ತಿರುವ ಸಾಧನಾ ಸಮಾವೇಶದಲ್ಲಿ ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗು ರಾಜ್ಯಸಭೆ ಸದಸ್ಯ ಆಸ್ಕರ್ ಫರ್ನಾಂಡಿಸ್ ಪಾಲ್ಗೊಂಡಿದ್ದು, ಈ ವೇಳೆ ಮಾತನಾಡಿದ ಅವರು, ಮಹಾತ್ಮ ಗಾಂಧಿಯವರ ಕನಸನ್ನು ಸಿದ್ದರಾಮಯ್ಯ ರಾಜ್ಯದಲ್ಲಿ  ಈಡೇರಿಸುತ್ತಿದ್ದಾರೆ ಎಂದು ಹೊಗಳಿದರು. ಅಧಿಕಾರ ಸ್ವೀಕರಿಸಿದ ಒಂದೇ ಗಂಟೆಯಲ್ಲಿ ಸಿಎಂ ಸಿದ್ದರಾಮಯ್ಯ ಒಂದು ರೂ.ಗೆ ಅಕ್ಕಿ ಕೊಡುವ ತೀರ್ಮಾನ ಪ್ರಕಟಿಸಿದರು. ನಂತರ ಸಿದ್ದರಾಮಯ್ಯನವರು ಹಸಿವು ಮುಕ್ತ ಕರ್ನಾಟಕ ಮಾಡಿದರು, ರಾಜ್ಯದ ಜನತೆ ನೀವು ಮಾಡಿದ ಕೆಲಸಗಳನ್ನು ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ. ರಾಜ್ಯದ ಬೇರೆ ಭಾಗಗಳಿಂದ ಬರುವವರಿಗೆ ಮಂಗಳೂರೇ ದುಬೈ, ಲಕ್ಷಗಟ್ಟಲೆ ಜನ ಇಲ್ಲಿಗೆ ಕೆಲಸ ಹುಡುಕಿಕೊಂಡು ವಲಸೆ ಬರುತ್ತಾರೆ, ಇವರಿಗೆಲ್ಲ ಉಳಿದುಕೊಳ್ಳುವ ಹಕ್ಕು ಇದೆ ಎಂದರು. ಉಡುಪಿಯ ದೊಡ್ಡ ಯೋಜನೆ ವರಾಹಿ ಯೋಜನೆಗೆ ಇವತ್ತು ಚಾಲನೆ ನೀಡಲಾಗಿದ್ದು, ಇದಕ್ಕೆ ಕಾರಣ ಸಿಎಂ ಸಿದ್ದರಾಮಯ್ಯನವರು ಎಂದರು.

ನೀರಾವರಿ ಯೋಜನೆ ಇಲ್ಲದೇ ನಾವು ಬ್ರಹ್ಮಾವರ ಸಕ್ಕರೆ ಕಾರ್ಖಾನೆ ನಡೆಸಿದ್ದೇವೆ, ವರಾಹಿ ಯೋಜನೆಯಿಂದ ಸಕ್ಕರೆ ಕಾರ್ಖಾನೆಗೆ ನೀರು ದೊರೆಯಲಿದೆ, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ನೆರವು ಕೊಡಿ ಎಂದು ಇದೇ ವೇಳೆ ಆಸ್ಕರ್ ಫರ್ನಾಂಡಿಸ್ ಸಿಎಂಗೆ ಒತ್ತಾಯಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ