ನೋ ಪ್ಯಾಂಟ್ಸ್ ಡೇ...

New York: No pants day

08-01-2018

ನ್ಯೂಯಾರ್ಕ್ ನಗರ, ಅಮೆರಿಕದ ಸಾಂಸ್ಕೃತಿಕ, ಆರ್ಥಿಕ ಮತ್ತು ಮಾಧ್ಯಮ ರಾಜಧಾನಿ ಎಂದು ವಿಶ್ವ ಪ್ರಸಿದ್ಧವಾಗಿದೆ. ವಿಶ್ವ ಸಂಸ್ಥೆಯ ಪ್ರಧಾನ ಕಚೇರಿಯೂ ನ್ಯೂ ಯಾರ್ಕ್‌ನಲ್ಲೇ ಇದೆ. ಇಲ್ಲಿನ ಜನರೂ ಕೂಡ ತಮ್ಮದೇ ಆದ ಕ್ರೇಜಿ ಅನ್ನುವಂಥ ನಡವಳಿಕೆಗಳಿಗೆ ಹೆಸರಾದವರು. ಅದಕ್ಕೆ ತಕ್ಕಂತೆ, ನ್ಯೂಯಾರ್ಕ್‌ನಲ್ಲಿ ವಾರ್ಷಿಕ ನೋ ಪ್ಯಾಂಟ್ಸ್ ಸಬ್‌ ವೇ ರೈಡ್ ಆಚರಿಸಿದ್ದಾರೆ.

ಈ ಸೀಸನ್‌ನಲ್ಲಿ ನ್ಯೂಯಾರ್ಕ್ ನಗರದಲ್ಲಿ ಕೊರೆಯುವ ಚಳಿಯಿರುತ್ತದೆ. ಬಹುತೇಕರು ಬೆಚ್ಚಗಿನ ಬ್ಯಾಂಕೆಟ್ ಹೊದ್ದು ಕಾಫಿ ಕುಡಿಯುತ್ತಾ ಮುದುರಿ ಕುಳಿತಿರುತ್ತಾರೆ. ಹೀಗಿದ್ದರೂ ಕೂಡ, ಕೆಲವರು ಅತಿ ಉತ್ಸಾಹದಿಂದ 10ನೇ ನೋ ಪ್ಯಾಂಟ್ಸ್ ಡೇ ಆಚರಿಸಿದ್ದಾರೆ. ನೋ ಪ್ಯಾಂಟ್ಸ್ ಪ್ಯಾಂಟ್ಸ್ ಡೇ ದಿನ, ಸೊಂಟದಿಂದ ಕೆಳಕ್ಕೆ ಅಂಡರ್‌ವೇರ್ ಬಿಟ್ಟರೆ ಬೇರೆ ಏನನ್ನೂ ಧರಿಸದೆ, ಸಬ್‌ ವೇ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಪುರುಷರು ಮಾತ್ರವಲ್ಲ ಮಹಿಳೆಯರೂ ಕೂಡ ಈ ಹುಚ್ಚಾಟದಲ್ಲಿ ತುಂಬಾ ತುಂಟತನದಿಂದ ಪಾಲ್ಗೊಂಡಿದ್ದಾರೆ.

ಈ ನೋ ಪ್ಯಾಂಟ್ಸ್ ಪ್ಯಾಂಟ್ಸ್ ಡೇ ಅಚರಣೆ ಹುಟ್ಟಿಹಾಕಿದ್ದು, ಪ್ರಸಿದ್ಧ ಟೆಕ್ಸಾಸ್‌ ಯೂನಿವರ್ಸಿಟಿಯ ವಿದ್ಯಾರ್ಥಿಗಳು. ಪ್ರತಿ ವರ್ಷ ತಮ್ಮ ಸೆಮೆಸ್ಟರ್ ಮುಗಿದ ನಂತರ ಅದನ್ನು "Yaaaaas" ಮುಗೀತು ಎಂದು ಕಿರುಚುವ ಮೂಲಕ ಆಚರಿಸುವ ಬದಲು, ಏನಾದರೂ ಹೊಸದನ್ನು ಮಾಡಬೇಕೆಂದು ಹೊರಟ ವಿದ್ಯಾರ್ಥಿಗಳಿಗೆ ಹೊಳೆದಿದ್ದೇ ಈ ವಿಚಿತ್ರ ಐಡಿಯ.

ನಿಮಗೆ ಗೊತ್ತಿರುವ ಹಾಗೆ, ಯಾವುದೇ ರೀತಿಯ ತಿಕ್ಕಲಾಟಗಳು ಸಾಂಕ್ರಾಮಿಕ, ಒಬ್ಬರಿಂದ ಮತ್ತೊಬ್ಬರಿಗೆ, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹರಡುತ್ತವೆ. ಇಲ್ಲೂ ಅದೇ ಆಗಿದ್ದು, ನ್ಯೂಯಾರ್ಕ್‌ನಲ್ಲಿ ಆರಂಭವಾದ ನೋ ಪ್ಯಾಂಟ್ಸ್ ಡೇ ಎನ್ನುವ ಈ ಹುಚ್ಚಾಟ ಕೆನಡ, ಫ್ರಾನ್ಸ್, ಸ್ವೀಡನ್‌, ಆಸ್ಟ್ರೇಲಿಯ, ಫಿನ್ಲೆಂಡ್ ಮತ್ತು ಬ್ರಿಟನ್ ದೇಶಗಳಿಗೂ ಹಬ್ಬಿದೆ.

ಆದರೆ, ಈ ವರ್ಷ ಅಮೆರಿಕದಲ್ಲಿ ಮೂಳೆ ಕೊರೆಯುವಂಥ ವಿಪರೀತ ಚಳಿ ಇದೆ. ಹೀಗಾಗಿ, ನೋ ಪ್ಯಾಂಟ್ಸ್ ಡೇ ಗೆ ಯಾರೂ ಪ್ಯಾಂಟ್ ಬಿಚ್ಚುವುದಿಲ್ಲವೇನೊ ಎಂಬ ಊಹೆ ಸುಳ್ಳಾಗಿದೆ. ನ್ಯೂಯಾರ್ಕ್ ನಗರದ ಸಬ್ ವೇ ರೈಲಿನಲ್ಲಿ ಪ್ರಯಾಣಿಸುವ ಎಲ್ಲರೂ ಪ್ಯಾಂಟ್ ಕಳಚಿ ಅರೆ ಬೆತ್ತಲಾಗಿ ಪ್ರಯಾಣಿಸಿ, ಉಚಿತ ಪ್ರದರ್ಶನ ಮಾಡಿದ್ದಾರೆ. ಇದು ಅಲ್ಲಿಯ ಕತೆ, ಆದರೆ ಇತ್ತೀಚಿನ ವರ್ಷಗಳಲ್ಲಿ ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತಿತರ ನಗರಗಳಲ್ಲಿ ಮೆಟ್ರೊ ರೈಲು ಆರಂಭವಾಗಿದೆ, ಒಂದುವೇಳೆ ಈ ನೋ ಪ್ಯಾಂಟ್ಸ್ ಡೇ ರೀತಿಯ ವಿಚಿತ್ರ ಆಚರಣೆ ಇಲ್ಲಿಗೂ ಏನಾದರೂ ಬಂದುಬಿಟ್ಟರೆ…?


ಸಂಬಂಧಿತ ಟ್ಯಾಗ್ಗಳು

new York America ಸೀಸನ್‌ ರಾಜಧಾನಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ