ದಿಲೀಪ್ ಹತ್ಯೆ:‘ಬಿಜೆಪಿ ಕಾರ್ಯಕರ್ತರೇ ಕಾರಣ’

Dileep Rao murder: HD Kumaraswamy allegation on BJP workers

08-01-2018

ಮೈಸೂರು: ಮಂಗಳೂರಿನ ದಿಲೀಪ್ ರಾವ್ ಕೊಲೆಗೆ ಬಿಜೆಪಿ ಕಾರ್ಯಕರ್ತರೇ ಕಾರಣ ಎಂದು, ಮಾಜಿ ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಮೈಸೂರಿನಲ್ಲಿಂದು, ಮಂಗಳೂರು ಕೋಮುಗಲಭೆಗಳ ಬಗ್ಗೆ ಪ್ರತಿಕ್ರಿಯೆ ನೀಡುವ ವೇಳೆ ಈ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಹಾಗು ಬಿಜೆಪಿ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಂತೆ ವರ್ತಿಸುತ್ತಿವೆ ಎಂದು ಆರೋಪಿಸಿದ ಅವರು, ಶಾಂತಿ ನೆಲಸಲು ಬೇಕಾದ ಮಾನದಂಡಗಳನ್ನು ಜೆಡಿಎಸ್ ಅನುಸರಿಸಲಿದೆ ಎಂದರು. ನಾಳೆ ಶಾಂತಿ ಸಭೆ ಹಾಗೂ ಸೌಹಾರ್ದ ಯಾತ್ರೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಎರಡು ರಾಜಕೀಯ ಪಕ್ಷಗಳ ಇತ್ತೀಚಿನ ಬೆಳವಣಿಗೆಗಳಿಂದ ಸೌಹಾರ್ದ ಯಾತ್ರೆ ಸಾಧ್ಯವಾಗಲಿಲ್ಲ, ರಾಷ್ಟ್ರೀಯ ಪಕ್ಷಗಳಿಗೆ ಕೋಮುವಾದ, ಜಾತಿವಾದವೇ ಮುಖ್ಯವಾಗಿದೆ, ಎರಡು ಪಕ್ಷಗಳು ಜನರ ಹಿತಬಯಸುವಲ್ಲಿ ವಿಫಲವಾಗಿವೆ, ಎರಡು ಪಕ್ಷಗಳ ಹಿಡನ್ ಅಜೆಂಡಾ ಕೋಮುವಾದವಾಗಿದೆ ಎಂದು ಕಿಡಿಕಾರಿದ್ದಾರೆ. ನಾವು ಅಭಿವೃದ್ಧಿ ವಿಚಾರವನ್ನು ಜನರ ಮುಂದಿಟ್ಟು ಮತ ಕೇಳುತ್ತೇವೆ ಎಂದರು.

ಇನ್ನು ಎಂ.ಸಿ.ನಾಣಯ್ಯ ಕಾಂಗ್ರೆಸ್ ಪಕ್ಷಕ್ಕೆ ಸೇರೋ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಎಂ.ಸಿ. ನಾಣಯ್ಯ ನಮ್ಮ ಪಕ್ಷದಲ್ಲೇ ಉಳಿಯುತ್ತಾರೆ, ಕಾಂಗ್ರೆಸ್ ಸೇರೋ ವಿಚಾರ ಉಹಾ-ಪೋಹಾ ಎಂದು ಸ್ಪಷ್ಟಪಡಿಸಿದ್ದಾರೆ. ಎತ್ತಿನಹೊಳೆ ಯೋಜನೆ ಸ್ಥಗಿತಗೊಳಿಸುತ್ತೇನೆ ಎಂದು ನಾನು ಹೇಳಿಲ್ಲ. ಎತ್ತಿನ ಹೊಳೆ ಯೋಜನೆ ಅನುಷ್ಠಾನಗೊಳಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ವೀರಪ್ಪ ಮೊಯ್ಲಿ ಎತ್ತಿಹೊಳೆ ನೀರನ್ನು ತಂದೇ ತರುತ್ತೇನೆ ಎಂದು ಭರವಸೆ ನೀಡಿದರು, ನಾಲ್ಕು ವರ್ಷ ಕಳೆದರು ಯೋಜನೆ ಅನಿಷ್ಠಾನವಾಗಲಿಲ್ಲ, ನಾನು ಅಧಿಕಾರಕ್ಕೆ ಬಂದರೇ ಎತ್ತಿನ ಹೊಳೆ ಯೋಜನೆಯಲ್ಲಿ ನಡೆದಿರುವ ಅವ್ಯವಹಾರ ಬಯಲು ಮಾಡುತ್ತೇನೆ ಎಂದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ