ಸಿದ್ಧರಾಮಯ್ಯ ನೇತ್ರತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ : ದಿಗ್ವಿಜಯ್ ಸಿಂಗ್

Kannada News

18-04-2017

ಹುಬ್ಬಳ್ಳಿ-  ನಾನು ಆರ್‌ಎಸ್‌ಎಸ್ ವಿರೋಧಿ ಇದ್ದೇನೆ, ಹಿಂದೂ ವಿರೋಧಿಯಲ್ಲ. ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಸಿದ್ಧರಾಮಯ್ಯ ನೇತ್ರತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ. ಅಧಿಕಾರಕ್ಕೆ ಬಂದರೆ ಮುಂದಿನ ಸಿಎಮ್ ಯಾರಾಗಬೇಕೆಂದು ಕಾಂಗ್ರೆಸ್ ಶಾಸಕಾಂಗ ಸಭೆ ತೀರ್ಮಾನಿಸುತ್ತೇವೆ. ಪಿಡಿಪಿ, ಬಿಜೆಪಿಯದ್ದು ಕಾಶ್ಮೀರದಲ್ಲಿ ಅನೈತಿಕ ಸಂಬಂಧ. ಹೀಗಾಗಿ ನಿರಂತರ ದಂಗೆಗಳು ನಡೆದು ಅಮಾಯಕರು ಸಾಯುತ್ತಿದ್ದಾರೆ. ಪಕ್ಷದ ವಿರುದ್ಧ ಮಾತನಾಡುವ ಕಾಂಗ್ರೆಸ್ ನಾಯಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಇವಿಎಮ್ ಮಷೀನ್ ಮೇಲೆ ನನಗೆ ನಂಬಿಕೆಯಿಲ್ಲ. ಮಹದಾಯಿ ಮತ್ತು ಕಾವೇರಿ ವಿವಾದ ವಿಚಾರ. ಅಂತರ್‌ರಾಜ್ಯ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯಗಳು ಕುಳಿತು ಚರ್ಚಿಸಬೇಕು. ಪರಸ್ಪರ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಬೇಕು ಎಂದು ಹುಬ್ಬಳ್ಳಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಹೇಳಿಕೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ