'ಸಾಧನಾ ಸಮಾವೇಶದಿಂದ ತೆರಿಗೆ ಹಣ ಪೋಲು’08-01-2018

ಶಿವಮೊಗ್ಗ: ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ರೆ ಹೇಗೋ, ಅದೇ ರೀತಿ ಹುಚ್ಚನ ಕೈಯಲ್ಲಿ ಆಡಳಿತ ಕೊಟ್ಟಂತಾಗಿದೆ ಎಂದು ಸಿಎಂ ವಿರುದ್ಧ ವಿಧಾನ ಪರಿಷತ್ ನ ವಿರೋಧ ಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ  ಕಾಂಗ್ರೆಸ್ ಸರ್ಕಾರ ಮತ್ತು ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದರು. ಜ್ಞಾನ ಇಲ್ಲದ ಮುಖ್ಯಮಂತ್ರಿಯನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಸಾಧನ ಸಮಾವೇಶದಲ್ಲಿ ಬರೀ ವಿರೋಧ ಪಕ್ಷವನ್ನು ಟೀಕೆ ಮಾಡುವುದಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದ್ದಾರೆ.

ಶಿವಮೊಗ್ಗದಲ್ಲಿಂದು ಮಾತನಾಡಿದ ಈಶ್ವರಪ್ಪ ಅವರು, ಸಾಧನಾ ಸಮಾವೇಶದಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡು ಚುನಾವಣೆ ಪ್ರಚಾರ ಮಾಡಲಾಗುತ್ತಿದೆ. ತೆರಿಗೆ ಹಣದಲ್ಲಿ ಸಾಧನಾ ಸಮಾವೇಶದಲ್ಲಿ ಮಾಡಿ, ಪಕ್ಷದ ಪ್ರಚಾರ ಮಾಡಲಾಗುತ್ತಿದೆ. ರಾಜ್ಯ ಕೊಲೆಗಡುಕರ ಸ್ವರ್ಗವಾಗಿದೆ, ಇದರ ನೇತೃತ್ವ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಎಂದು ಆರೋಪಿಸಿದ್ದಾರೆ.

ಹಿಂದೂ-ಮುಸ್ಲಿಂ ನಡುವೆ ಬೆಂಕಿ ಹಚ್ಚುವುದನ್ನ ಯಾರು ಕೂಡ ಸಹಿಸುವುದಿಲ್ಲ ಎಂದ ಅವರು, ವೀರೇಶ್ವರ-ಲಿಂಗಾಯತರಿಗೆ ಬೆಂಕಿ ಹಚ್ಚಲಾಗಿದೆ. ಸರ್ಕಾರದ ಹಣವನ್ನ ಸಾಧನಾ ಸಮಾವೇಶದಲ್ಲಿ ಬಳಸಬೇಡಿ. ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ಸಾಧನ ಸಮಾವೇಶ ವೇದಿಕೆ ಬಳಸಬೇಡಿ ಎಂದು ಆಗ್ರಹಿಸಿದ್ದಾರೆ.

ಹಿಂದೂ-ಮುಸ್ಲಿಂ ಜನಕ್ಕೆ ಬಿಜೆಪಿಯವರು ಒಂದೆ ರೀತಿ ಕಾಣುತ್ತಾರೆ. ಹಿಂದೂ ಮುಖಂಡರ ಹತ್ಯೆಯಾದಗ ಸಿಎಂ ಯಾರ ಮನೆಗೂ ಹೋಗಿಲ್ಲ. ಸಾವಿನಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಿದೆ . ಕಾಂಗ್ರೆಸ್ ಪಕ್ಷ ಹಿಂದೂ ಹೆಣಗಳ ಮೇಲೆ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಇವತ್ತಿಗೂ ನನ್ನ ಮನೆಯಲ್ಲಿ ಹಣದ ಕೌಟಿಂಗ್ ಮೆಷಿನ್ ಇದೆ. ಹಣ ಪ್ರಿಂಟ್ ಮಾಡುವ ಮೆಷಿನ್ ಇಲ್ಲ. ನಾನು ವ್ಯಾಪಾರಿ ಆದ್ದರಿಂದ ಕೌಟಿಂಗ್ ಮೆಷಿನ್ ಇಟ್ಟು ಕೊಂಡಿದ್ದೆನೆ ಎಂದು ಸಿಎಂ ಸಿದ್ದರಾಮಯ್ಯನವರ ಪ್ರಶ್ನೆಗೆ ಈಶ್ವರಪ್ಪ ಉತ್ತರಿಸಿದರು.


ಸಂಬಂಧಿತ ಟ್ಯಾಗ್ಗಳು

K.S.Eshwarappa siddaramaiah ಸಮಾವೇಶ ಮಾಣಿಕ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ