ಕ್ಷುಲ್ಲಕ ಕಾರಣಕ್ಕೆ ಇಬ್ಬರಿಗೆ ಚಾಕು ಇರಿತ

Tense in davanagere city...!

08-01-2018

ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರಿಗೆ ಚಾಕುವಿನಿಂದ ಇರಿದು ತೀವ್ರವಾಗಿ ಹಲ್ಲೆಗೊಳಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಜೀಲಾನ್ (22), ಇಮ್ರಾನ್ (18) ಹಲ್ಲೆಗೊಳಗಾದ ಯುವಕರು. ದಾವಣಗೆರೆಯ ಮಂಡಕ್ಕಿ ಭಟ್ಟಿ ಹಿಂಭಾಗದ ಕೊರಚರಹಟ್ಟಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಇರಿತಕ್ಕೊಳಗಾದ ಇಬ್ಬರು ಖಾಸಗಿ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆಪಡೆಯುತ್ತಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ. ಆದರೆ ಜೀವಕ್ಕೆ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆಂದು ತಿಳಿದು ಬಂದಿದೆ. ಜಿಲ್ಲೆಯ ಕೊರಚರಹಟ್ಟಿಯ ನಿವಾಸಿ ದುಗ್ಗೇಶ್ ಎಂಬ ವ್ಯಕ್ತಿ ಪಕ್ಕದ ಮನೆಯವರೊಡನೆ ಜಗಳವಾಡುತ್ತಿದ್ದ. ಜಗಳ ಬಿಡಿಸಲು ಹೋದ ಜಿಲಾನಿ ಹಾಗೂ ಇಮ್ರಾನ್ ನನ್ನು ದುಗ್ಗೇಶ್ ಮತ್ತು ಅವನ ಸ್ನೇಹಿತರು ಚಾಕುವಿನಿಂದ ಹಲ್ಲೆಮಾಡಿದ್ದಾರೆ. ಘಟನೆಯಿಂದ ದಾವಣಗೆರೆ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಗಿದೆ. ಅದಲ್ಲದೇ ಘಟನಾ ಸ್ಥಳದಲ್ಲಿ ಜಿಲ್ಲಾಧಿಕಾರಿ , ಎಸ್.ಪಿ,ಎ.ಎಸ್.ಪಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದು, ವದಾಂತಿಗಳಿಗೆ ಕಿಗೊಡಬಾರದು ಎಂದು, ಎಸ್.ಪಿ ಮನವಿ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Davanagere Attempte to murder ಚಾಕು ಅಪಾಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ