ಪ್ರೇಮ ವೈಫಲ್ಯ ಯುವಕ ಆತ್ಮಹತ್ಯೆಗೆ ಯತ್ನ...!

love failure: young man attempt to sucide

06-01-2018

ಬೆಂಗಳೂರು: ಜ್ಞಾನ ಭಾರತಿ ಕ್ಯಾಂಪಸ್ ಬಳಿ ನಿನ್ನೆ ರಾತ್ರಿ ಯುವಕನೊಬ್ಬ ಕತ್ತು ಕುಯ್ದುಕೊಂಡು ಆತ್ಮಹತ್ಯಗೆ ಯತ್ನ ಮಾಡಿರುವ ಘಟನೆ ನಡೆದಿದೆ. ಚಾಕು ಕತ್ತಿನ ಆಳಕ್ಕೆ ಇಳಿದು ಗಂಭೀರವಾಗಿ ಗಾಯಗೊಂಡಿರುವ ಮಲ್ಲತ್ತಹಳ್ಳಿಯ ಶರವಣ ಕುಮಾರ್(28)ರಾಜರಾಜೇಶ್ವರಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಡಿಸಿಪಿ ಅನುಚೇತ್ ತಿಳಿಸಿದ್ದಾರೆ.

ಮಲ್ಲತ್ತಹಳ್ಳಿಯ ಮನೆಯಿಂದ ಜ್ಞಾನ ಭಾರತಿ ಕ್ಯಾಂಪಸ್ ಗೆ ಸಂಜೆ ಬಂದಿದ್ದ ಶರವಣಕುಮಾರ್ ರಾತ್ರಿ  8ರ ವೇಳೆ ಮೊದಲು ವಿಷ ಸೇವಿಸಿ ನಂತರ ಚಾಕುವಿನಿಂದ ಕತ್ತುಕೊಂಡು ಆತ್ಮಹತ್ಯೆಗೆ ಯತ್ನಿಸಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಇದನ್ನು ನೋಡಿದ ಅಲ್ಲಿದ್ದ ವಿದ್ಯಾರ್ಥಿಗಳು ಜ್ಞಾನ ಭಾರತಿ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಸಾವಿನ ಅಂಚಿನಲ್ಲಿದ್ದ ಶರವಣ ಕುಮಾರ್‍ನನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ದೊರೆತ ಶರವಣ ಕುಮಾರ್ ಮೊಬೈಲ್‍ನಲ್ಲಿ  ಕೊನೆಯ ಬಾರಿಗೆ ಹುಡುಗಿಯೊಬ್ಬಳಿಗೆ ಕರೆ ಮಾಡಿದ್ದು ಪ್ರೇಮವೈಫಲ್ಯದ ಹಿನ್ನಲೆಯಲ್ಲಿ ಆತ್ಮಹತ್ಯಗೆ ಯತ್ನ ನಡೆದಿದೆ ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಜ್ಞಾನಭಾರತಿ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

University suicide ಪ್ರಕರಣ ಚಿಕಿತ್ಸೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ