ಬಶೀರ್ ಹಲ್ಲೆ ಪ್ರಕರಣ: ನಾಲ್ವರ ಬಂಧನ

Mangalore Basheer case: Four arrested

06-01-2018

ಮಂಗಳೂರು: ಮಂಗಳೂರಿನಲ್ಲಿ ನಡೆದ ಬಶೀರ್ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ,  ನಾಲ್ವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂದೇಶ್, ಧನುಶ್, ಸೃಜಿತ್, ಕಿಷನ್ ಎಂಬುವರನ್ನು ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಗಳನ್ನಾಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.  ಜನವರಿ 3ರ ರಾತ್ರಿ ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಹಲ್ಲೆ ನಡೆದಿತ್ತು, ಹಲ್ಲೆ ಸಂಬಂಧ ದೃಶ್ಯಗಳು ಸ್ಥಳೀಯ ಕಟ್ಟಡದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.

ಇನ್ನು ಹಲ್ಲೆಗೆ ಒಳಾಗದ ಬಶೀರ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿಲ್ಲ. ಎಜೆ ಆಸ್ಪತ್ರೆಯಲ್ಲಿ‌ಚಿಕಿತ್ಸೆ ಪಡೆಯುತ್ತಿರುವ ಬಶೀರ್ ಗೆ 17 ಕಡೆ ಗಾಯಗಳಾಗಿವೆ. ಪ್ರಮುಖವಾಗಿ ಎದೆ,ಹೊಟ್ಟೆ ಹಾಗೂ ಕುತ್ತಿಗೆ ಭಾಗದಲ್ಲಿ ಬಲವಾದ ಪೆಟ್ಟು ಬಿದ್ದಿರುವ ಕಾರಣ ನಿನ್ನೆರಾತ್ರಿ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು. ನಿರಂತರವಾಗಿ ಡಯಾಲಿಸಿಸ್ ಮಾಡಬೇಕಿದೆ. ಜೊತೆಗೆ‌ ಹೊಟ್ಟೆ ಹಾಗೂ ಕುತ್ತಿಗೆ ಭಾಗಕ್ಕೂ ಸೂಕ್ತ ಚಿಕಿತ್ಸೆ ನೀಡಬೇಕಿದೆ. ಎಲ್ಲ ಭಾಗಕ್ಕೂ ಚಿಕಿತ್ಸೆ ನೀಡಬೇಕಾಗಿರುವುದರಿಂದ ಬಶೀರ್ ದೇಹ ಚಿಕಿತ್ಸೆ ಸ್ಪಂದಿಸುವುದಕ್ಕೆ ಕಷ್ಟಪಡುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಈಗಾಗಲೇ ನುರಿತ ವೈದ್ಯರು ಚಿಕಿತ್ಸೆಯನ್ನು ಆರಂಭಿಸಿದ್ದಾರೆ. ನಿನ್ನೆ ಆಸ್ಪತ್ರೆಗೆ ಭೇಟಿನೀಡಿದ ಮೊಯಿದೀನ್ ಬಾವ ಹೆಚ್ಚಿನ ಚಿಕಿತ್ಸೆಗೆ ಅದ್ಯತೆ ನೀಡುವಂತೆ ತಿಳಿಸಿದ್ದಾರೆ. ಬಶೀರ್ ಸದ್ಯಕ್ಕೆ ಎಸ್ ಐಸಿಯು ನಲ್ಲಿದ್ದು, ಬಶೀರ್ ಮನೆಯವರ ಆಂತಕ‌ ಮನೆ ಮಾಡಿದೆ.


ಸಂಬಂಧಿತ ಟ್ಯಾಗ್ಗಳು

Mangalore Basheer ಕೊಲೆಯತ್ನ ಸಿಸಿಟಿವಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ