ಸಿಎಂ ವಿರುದ್ಧ ಎಚ್ಡಿಕೆ ವಿವಾದಾತ್ಮಕ ಹೇಳಿಕೆ

HDK controversial statement about siddaramaiah

06-01-2018

ಬಾಗಲಕೋಟೆ: ಸಿದ್ದರಾಮಯ್ಯ ನಮ್ಮಪ್ಪನನ್ನು ಯಾವಾಗ ಇಟ್ಟುಕೊಂಡಿದ್ದರು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಪ್ರತಿಭಾಷಣದಲ್ಲಿ ಜೆಡಿಎಸ್,ಬಿಜೆಪಿಯವರು ಅವರಪ್ಪನಾಣೆಗೂ ಅಧಿಕಾರಕ್ಕೆ ಬರೋದಿಲ್ಲ ಅಂತಿದ್ದಾರೆ. ಅವರು ನಾನೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಮೊದಲು ಅವರಪ್ಪನ ಮೇಲೆ ಆಣೆ ಮಾಡಿ ಹೇಳಲಿ ಎಂದು ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ನನ್ನ ಬಗ್ಗೆ ಮಾತನಾಡುತ್ತಾರೆ, ನನ್ನ ಹೋರಾಟದ ಫಲವಾಗಿ ಅವರು ಸಿಎಂ ಆಗಿದ್ದಾರೆ. ನನಗೆ ಹಿಟ್ ಆ್ಯಂಡ್ ರನ್ ಹೇಳುವ ಸಿದ್ದರಾಮಯ್ಯನವರೇ ಹಿಟ್ ಆ್ಯಂಡ್ ರನ್ ಸಿಎಂ ಎಂದಿದ್ದಾರೆ. ಬೊಗಳೆ ಭಾಷಣ ಮಾಡುತ್ತಾ ಜನಪರ ಕಾರ್ಯ ಮಾಡದೆ ಹೊರಟ ಸಿದ್ದರಾಮಯ್ಯ ಓರ್ವ ಹಿಟ್ ರನ್ ಸಿಎಂ ಎಂದರು. ಇನ್ನು ಕರಾವಳಿ ಕೋಮು ಸಂಘರ್ಷದ ಬಗ್ಗೆ ಮಾತನಾಡಿದ‌ ಕುಮಾರಸ್ವಾಮಿ, ಬಿಜೆಪಿ ಕಾಂಗ್ರೆಸ್ ಎರಡು ರಾಜಕೀಯ ಪಕ್ಷಗಳು ರಕ್ತದೋಕುಳಿ ಆಡುತ್ತಿವೆ. ಒಂದು ಪಕ್ಷ ರಕ್ತದೋಕುಳಿ ಆಡಿದರೆ ಇನ್ನೊಂದು ಪಕ್ಷ ಆಡಲಿ ಬಿಡಿ ಅಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಧರ್ಮಾಧಾರಿತ ಸಂಘಟನೆಗಳೆಲ್ಲವನ್ನು ಬ್ಯಾನ್ ಮಾಡಬೇಕು, ಧರ್ಮದ ಹೆಸರಿನಲ್ಲಿ ರಕ್ತದೋಕುಳಿ ಆಡಲಾಗುತ್ತಿದೆ ಇದು ಸರಿಯಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು. ಸಿವೋಟರ್ ಸಮೀಕ್ಷೆ ಬಗ್ಗೆ ಗರಂ ಆದ ಕುಮಾರಸ್ವಾಮಿ, ಸಿವೋಟರ್ಸ್ ಮಾಲೀಕ ಸಿದ್ದರಾಮಯ್ಯನವರ ಆಪ್ತ ದುಡ್ಡು ಕೊಟ್ಟು ಕಾಂಗ್ರೆಸ್ ಪರ ಸಮೀಕ್ಷೆ ಮಾಡಿಸಲಾಗಿದೆ ಎಂದು ಆರೋಪ ಮಾಡಿದರು. ಮುಂದಿನ ಚುನಾವಣೆಯಲ್ಲಿ ಯಾವುದೇ ರಾಷ್ಟ್ರೀಯ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳೋದಿಲ್ಲ ಎಂದ ಹೆಚ್ ಡಿ ಕುಮಾರಸ್ವಾಮಿ, ಸಣ್ಣಪುಟ್ಟ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳೋದಾಗಿ ಹೇಳಿದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ