ಅಜ್ಜಿ ಕತ್ತಿಗೆ ಕೈಹಾಕಿದ ದುಷ್ಕರ್ಮಿಗಳು

Chain snach in bengaluru

06-01-2018

ಬೆಂಗಳೂರು: ವೃದ್ದೆಯೊಬ್ಬರ ಚಿನ್ನದ ಸರ ಕದಿಯಲು ದುಷ್ಕರ್ಮಿಗಳು ಯತ್ನಿಸಿರುವ ಘಟನೆಯು ನಗರದಲ್ಲಿ ನಡೆದಿದೆ. ಬೆಂಗಳೂರಿನ ವಿದ್ಯಾರಣ್ಯಪುರದ 3ನೇ ಮುಖ್ಯ ರಸ್ತೆಯಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಘಟನೆಯಲ್ಲಿ ವೃದ್ಧೆಗೆ ಗಂಭೀರಗಾಯಗಳಾಗಿವೆ. ವಿದ್ಯಾರಣ್ಯಪುರದ ನಿವಾಸಿ ವಿಜಯಲಕ್ಷ್ಮಿ ಎಂಬ ವೃದ್ಧ ಮಹಿಳೆಯು ಪಕ್ಕದ ಮನೆಗೆ ಹೋಗಿ ಬರುತ್ತಿದ್ದ ವೇಳೆ ಇಬ್ಬರು ದುಷ್ಕರ್ಮಿಗಳಿಂದ ವೃದ್ಧೆಯ ಸರ ಕಿತ್ತುಕೊಳ್ಳಲು  ವಿಫಲಯತ್ನ ನಡೆಸಿದ್ದಾರೆ. ಚಿನ್ನದ ಸರ ಕದಿಯಲು ಸಾಧ್ಯವಾಗದಿದ್ದು, ಅಜ್ಜಿಯನ್ನು ತಳ್ಳಿ ಪರಾರಿ ಪರಾರಿಯಾಗಿದ್ದಾರೆ. ಈ ವೇಳೆ ಅಜ್ಜಿಯ ಕುತ್ತಿಗೆ ಮತ್ತು ಹಣೆಗೆ ಗಂಭೀರ ಗಾಯಗಳಾಗಿವೆ. ಇನ್ನು ಸ್ಥಳೀಯರ ನೆರವಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ವಿದ್ಯಾರಣ್ಯಪುರ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

chain snach robbery ದುಷ್ಕರ್ಮಿ ಆಸ್ಪತ್ರೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ