ಅಮ್ಮಾ ಸಾರಿ...ಎಂದ್ಹೇಳಿ ಯುವಕ ಆತ್ಮಹತ್ಯೆ

amma sorry.. young man sucide in bangalore

06-01-2018

ಬೆಂಗಳೂರು: ಯುವಕನೊಬ್ಬ ತಾನು ಆಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ವೀಡಿಯೊ ಮಾಡಿಟ್ಟು ಸಾವನ್ನಪ್ಪಿರುವ ಘಟನೆಯು ಬೆಂಗಳೂರಿನಲ್ಲಿ ನಡೆದಿದೆ. ಫೈನಾನ್ಸಿಯರ್ ಕಿರುಕುಳ ಹಾಗು ಪ್ರೀತಿ ಸಿಗದಿದ್ದಕ್ಕೆ ನೊಂದಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗರದ ಕುರುಬರಹಳ್ಳಿಯಲ್ಲಿ ಘಟನೆ ನಡೆದಿದೆ. ರಾಜೇಶ್ (26) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.

ಸಾಯುವ ಮುನ್ನ ತನಗಾದ ನೋವನ್ನು ವೀಡಿಯೊ ಮಾಡಿರೊ ರಾಜೇಶ್, ಕಿರಣ್ ಅನ್ನೋರ ಬಳಿ 25000 ಫೈನಾನ್ಸ್ ಪಡೆದಿದ್ದು, ಯಾರು ಫೈನಾನ್ಸ್ ನಿಂದ ಸಾಲ ಮಾಡಬೇಡಿ. ಕಿರಣ್ ನಾನು ಮಾತ್ರ ಸಾಲಕ್ಕೆ ಸೈನ್  ಹಾಕಿರೋದು, ನಮ್ಮ ಮನೆಯವರಿಗೆ ಏನೂ ಮಾಡಬೇಡ, ಇದುವರೆಗೂ ನಮ್ಮ ಮನೆಯವರನ್ನು ಯಾರೂ ಮುಟ್ಟಿರಲಿಲ್ಲ ನೀನು ಟಚ್ ಮಾಡಿಬಿಟ್ಟೆ ಎಂದು ವೀಡಿಯೊದಲ್ಲಿ ಹೇಳಿದ್ದಾನೆ. ಅಲ್ಲದೇ ನೀನು ಸಿಗ್ತೀಯ ಅನ್ಕೊಂಡೆ, ತುಂಬಾ ಮೋಸ ಮಾಡಿಬಿಟ್ಟೆ ನೀನು ನಿನಗೋಸ್ಕರ ಹೇಳಿದ್ದೆಲ್ಲಾ ಮಾಡಿದೆ ನಾನು, ಅದಕ್ಕೆ ನೀನು ಕೊಟ್ಟಿದ್ದಾದ್ರು ಏನು ಅಂತಾ ಹುಡುಗಿಯೊಬ್ಬಳ ಬಗ್ಗೆ ಮಾತನಾಡಿರೊ ರಾಜೇಶ್, ಕೊನೆಯಲ್ಲಿ ಅಮ್ಮಾ ಸಾರಿ ಅಂತಾ ಕೂಡ ಹೇಳಿ, ಆ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಸಂಬಂಧಿತ ಟ್ಯಾಗ್ಗಳು

suicide video ಸಾಲ ಫೈನಾನ್ಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ