ನೀವು ಎಷ್ಟು ನಿಪುಣರು?

How skilled are you?

06-01-2018

ಯಾವುದೇ ವೃತ್ತಿಗೆ ಸಂಬಂಧಿಸಿದಂತೆ ಭಾರತೀಯರಲ್ಲಿ ಎಷ್ಟರ ಮಟ್ಟಿನ ಕೌಶಲ್ಯ ಇದೆ. ಕೌಶಲ್ಯ ಅಥವ ತಮ್ಮ ನೈಪುಣ್ಯತೆ ಗಳಿಸಿಕೊಳ್ಳಲು ಭಾರತೀಯರು ಎಷ್ಟು ಹಣ ಖರ್ಚು ಮಾಡುತ್ತಾರೆ? ಉತ್ತಮ ಕೌಶಲ್ಯಗಳು ಉತ್ತಮ ಉದ್ಯೋಗ ದೊರೆಯುವಂತೆ ಮಾಡುತ್ತವೆ ಎಂದು ಭಾರತೀಯರಿಗೆ ಅನ್ನಿಸುತ್ತದೆಯೇ? ಇವೆಲ್ಲ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಒಂದು ಸಮೀಕ್ಷೆ ನಡೆಸಲಿದೆ. ನಾಲ್ಕು ತಿಂಗಳ ಕಾಲ ನಡೆಯಲಿರುವ ಈ ಸಮೀಕ್ಷೆ ಇದೇ ತಿಂಗಳಿನಿಂದ ಆರಂಭವಾಗಲಿದೆ.

ಈ ಕೌಶಲ್ಯ ಸಮೀಕ್ಷೆಯನ್ನು ಸಿಎಂಐಇ ಅಂದರೆ, ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಮತ್ತು ಎನ್‌ಎಸ್‌ಡಿಸಿ ಅಂದರೆ ನ್ಯಾಷನಲ್ ಸ್ಕಿಲ್ ಡವಲಪ್‌ಮೆಂಟ್ ಕಾರ್ಪೊರೇಷನ್ ಜಂಟಿಯಾಗಿ ಕೈಗೊಳ್ಳಲಿವೆ. ದೇಶದ ಒಂದು ಲಕ್ಷ ಅರವತ್ತು ಸಾವಿರ ಮನೆಗಳಿಗೆ ಭೇಟಿ ಕೊಟ್ಟು ಮಾಹಿತಿ ಸಂಗ್ರಹಿಸಲಾಗುತ್ತದೆ. ಈ ಮಾಹಿತಿ ಆಧರಿಸಿ ‘ಸ್ಕಿಲ್ ಇಂಡಿಯ’ ಅಂದರೆ ಕೌಶಲ್ಯ ಭಾರತ ಯೋಜನೆಯ ಅಡಿ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

Skill development ಸಮೀಕ್ಷೆ ‘ಸ್ಕಿಲ್ ಇಂಡಿಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ