ಆತಂಕದಲ್ಲಿ ಬಿಎಸ್ ವೈ...!

yogi participate in parivarthana yatra yeddyurappa in anxiety...!

06-01-2018

ಬಿಜೆಪಿಯಲ್ಲಿ ಮತ್ತೊಂದು ಆಂತರಿಕ ಸಂಘರ್ಷ ಬಯಲಾಗಿದೆ. ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಗ್ಗೆ ಬಿ.ಎಸ್.ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದು, ಯುಪಿ ಸಿಎಂ ಬೆಂಗಳೂರಿಗೆ ಬರುವುದಕ್ಕೆ ಖುದ್ದು ಯಡಿಯೂರಪ್ಪರಿಂದಲೇ ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ.

ಪರಿವರ್ತನಾ ಸಮಾವೇಶಗಳಲ್ಲಿ ಯೋಗಿ ಆದಿತ್ಯನಾಥ್ ಭಾಗವಹಿಸುವುದು ಬಿಎಸ್ ವೈಗೇ ಇಷ್ಟವಿಲ್ಲ ಎಂದು, ಯುಪಿ ಸಿಎಂ ಆದಿತ್ಯನಾಥ್ ರ ಹಿಂದುತ್ವವಾದಿ ಭಾಷಣದಿಂದ ಬಿಎಸ್ ವೈ ಆತಂಕಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದಿತ್ಯನಾಥ್ ರ ತೀವ್ರವಾದಿ ಭಾಷಣದಿಂದ ಮತ್ತ್ಯಾವ ಸಮಸ್ಯೆ ಹುಟ್ಟಿಕೊಳ್ಳುವುದೋ ಎಂಬ ದಿಗಿಲಿನಲ್ಲಿದ್ದಾರಂತೆ ಬಿಎಸ್ ವೈ.

ಪ್ರತಾಪ್ ಸಿಂಹ, ಅನಂತ ಕುಮಾರ್ ಹೆಗಡೆಯವರ ಕೆಲವು ವಿವಾದಾತ್ಮಕ ಹೇಳಿಕೆಗಳಿಂದ ಪಕ್ಷಕ್ಕೆ ಧಕ್ಕೆಯಾಗಿದೆ, ಅದಲ್ಲದೇ ಹಿಂದುತ್ವ, ಧರ್ಮಗಳ ಬಗ್ಗೆ ಇವರಿಬ್ಬರಿಗಿಂತಲೂ ಯೋಗಿ ಆದಿತ್ಯನಾಥ್ ಹೆಚ್ಚು ತೀವ್ರವಾದಿ ಭಾಷಣ ಮಾಡುತ್ತಾರೆ. ಈಗಾಗಲೇ ಪ್ರತಾಪ್ ಸಿಂಹ, ಅನಂತ್ ಕುಮಾರ ಹೆಗಡೆ ವಿವಾದಾತ್ಮಕ ಹೇಳಿಕೆ ಕೊಡದಂತೆ ಬಿಎಸ್ ವೈ ಸೂಚಿಸಿದ್ದಾರೆ. ಆದರೆ ಇಂಥ ಸೂಚನೆ ಯೋಗಿ ಆದಿತ್ಯನಾಥ್ ಗೆ ಕೊಡಲಾಗದೇ ಬಿಎಸ್ ವೈ ಅಸಹಾಯಕತೆಯಲ್ಲಿದ್ದಾರೆ ಎನ್ನಲಾಗಿದೆ.

ಇದೇ ಜನವರಿ 7ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪರಿವರ್ತನಾ ಸಮಾವೇಶದಲ್ಲಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ. ಇದರಿಂದ ಆತಂಕಕ್ಕೊಳಗಾಗಿರುವ ಬಿ.ಎಸ್.ಯಡಿಯೂರಪ್ಪ, ಯೋಗಿ ಆದಿತ್ಯನಾಥ್ ಬರದಂತೆ ತಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ ಆದರೆ ಹೈಕಮಾಂಡ್ ಸೂಚನೆಯಂತೆ ಆದಿತ್ಯ ನಾಥ್ ಬೆಂಗಳೂರಿಗೆ ಬರುತ್ತಿದ್ದು, ಇದನ್ನು ಅನಿವಾರ್ಯವಾಗಿ ಯಡಿಯೂರಪ್ಪ ಒಪ್ಪಿಕೊಳ್ಳಬೇಕಾಗಿದೆ.


ಸಂಬಂಧಿತ ಟ್ಯಾಗ್ಗಳು

Yeddyurappa Yogi Adityanath ಹೈಕಮಾಂಡ್ ವಿವಾದಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ