ಪಕ್ಷದ ಚಿಹ್ನೆಗಾಗಿ ಲಂಚದ ಆರೋಪ ಹಿನ್ನೆಲೆ ಟಿಟಿವಿ ದಿನಕರನ್‍ಗಾಗಿ ಪೊಲೀಸರ ಶೋಧ

Kannada News

18-04-2017

ಬೆಂಗಳೂರು,ಏ.18- ಅಣ್ಣಾಡಿಎಂಕೆಯ 'ಎರಡೆಲೆ' ಚಿಹ್ನೆಯನ್ನು ತಮ್ಮ ಬಣಕ್ಕೆ ನೀಡಿದರೆ 50 ಕೋಟಿ ರೂ ಲಂಚ ನೀಡುವುದಾಗಿ ಆಮಿಷವೊಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಡಿಎಂಕೆ ಉಪಕಾರ್ಯದರ್ಶಿ ಶಶಿಕಲಾ ಬಣದ ಟಿಟಿವಿ ದಿನಕರನ್‍ಗಾಗಿ ದೆಹಲಿ ಪೊಲೀಸರು ನಗರದಲ್ಲಿ ಶೋಧ ನಡೆಸುತ್ತಿದ್ದಾರೆ.
50 ಕೋಟಿ ರೂ ಲಂಚ ನೀಡುವುದಾಗಿ ಆಮಿಷವೊಡ್ಡಿದ್ದ ಪ್ರಕರಣಕ್ಕೆ ಸಂಬಂಧ ಈಗಾಗಲೇ ಎಫ್‍ಐಆರ್ ದಾಖಲಿಸಿರುವ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ನಡುವೆ ದಿನಕರನ್ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ತಂಗಿರುವ ಮಾಹಿತಿ ಇದೆ.
ದಿನಕರನ್ ಬೆಂಗಳೂರಿನ ಖಾಸಗಿ ಹೋಟೆಲ್ ತಲುಪಿದ್ದಾರೆ ಎನ್ನಲಾಗಿದ್ದು, ಇಂದು ಮಧ್ಯಾಹ್ನ ಪರಪ್ಪನ ಅಗ್ರಹಾರಕ್ಕೆ ತೆರಳಿ ಶಶಿಕಲಾ ಭೇಟಿಯಾಗಬೇಕಿತ್ತು. ಆದರೆ ಶಶಿಕಲಾ ಭೇಟಿಯ ಸಂದರ್ಭದಲ್ಲಿ ಪೊಲೀಸರು ಬಂಧಿಸುವ ಭಯದಿಂದ ದಿನಕರನ್ ಭೇಟಿ ರದ್ದಾಗಿತ್ತು. ಬಳಿಕ ದಿನಕರನ್ ಎಲ್ಲಿದ್ದಾರೆ ಎಂಬ ಮಾಹಿತಿ ಇರಲಿಲ್ಲ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ