ಪ್ರಗತಿಪರ ಸಂಘಟನೆಗಳಿಂದ ಬಾಗಲಕೋಟೆ ಬಂದ್

06-01-2018
ಬಾಗಲಕೋಟೆ: ಕೋರೆಗಾಂವ್ ನಲ್ಲಿ ದಲಿತರ ಮೇಲಿನ ದೌರ್ಜನ್ಯ, ವಿಜಯಪುರದ ದಾನಮ್ಮ ಮೇಲಿನ ಅತ್ಯಾಚಾರ-ಹತ್ಯೆ ಖಂಡಿಸಿ, ವಿವಿಧ ದಲಿತ ಪರ ಮತ್ತು ಪ್ರಗತಿಪರ ಸಂಘಟನೆಗಳಿಂದ ಬಾಗಲಕೋಟೆ ಬಂದ್ ಗೆ ಕರೆ ನೀಡಿದ್ದು, ಬಾಗಲಕೋಟೆಯ ಬಹುತೇಕ ಕಡೆ, ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಇನ್ನು ಬಂದ್ ನಿಮಿತ್ತ ಬಸ್ ಸಂಚಾರ ವಿರಳವಾಗಿದೆ. ಬಾಗಲಕೋಟೆ ನಗರದಲ್ಲಿ ದಲಿತ ಸಂಘಟನೆಗಳು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಿದ್ದಾರೆ. ನವನಗರದ ಅಂಬೇಡ್ಕರ್ ಭವನದಿಂದ ಡಿಸಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದು, ದಲಿತ ವಿರೋಧಿಗಳಿಗೆ ಶಿಕ್ಷೆಯಾಗುವಂತೆ ಒತ್ತಾಯಿಸಲಿದ್ದಾರೆ. ಅಲ್ಲದೇ ಸಚಿವ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಹೇಳಿಕೆಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ