‘ಗೋವಾ ಸರ್ಕಾರದ ನಾಟಕ ಬಯಲು ಮಾಡ್ತೇವೆ’

MB patil reaction on Mahadayi issue

05-01-2018

ವಿಜಯಪುರ: ಗೋವಾ ಸಿಎಂ ಮನೋಹರ್ ಪರಿಕ್ಕರ್ ಹಾಗೂ ಯಡಿಯೂರಪ್ಪ ಮಹದಾಯಿ ಹೋರಾಟಗಾರರಿಗೆ ಮೋಸ ಮಾಡಿದ್ದಾರೆ ಎಂದು ನೀರಾವರಿ ಸಚಿವ ಎಂಬಿ ಪಾಟೀಲ್ ದೂರಿದ್ದಾರೆ. ವಿಜಯಪುರದಲ್ಲಿಂದು ಮಾತನಾಡಿದ ಪಾಟೀಲ್ ಅವರು, ಮನೋಹರ್ ಪರಿಕ್ಕರ್ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಪ್ರೋಟೋಕಾಲ್ ಪ್ರಕಾರ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಬೇಕಿತ್ತು ಎಂದಿದ್ದಾರೆ. ಡಿಪಿಎಪಿ ಪ್ರದೇಶಕ್ಕೆ ಮಾತ್ರ ನೀರು ಕೊಡುವುದಾಗಿ ಗೋವಾ ಹೇಳಿದೆ. ಟ್ರಿಬ್ಯೂನಲ್ ನಲ್ಲಿ ಮಹಾದಾಯಿ ವಿಚಾರ ಇರುವಾಗ ಗೋವಾ ಸಿಎಂ ಈ ರೀತಿ ಹೇಳಬಾರದಿತ್ತು. 190 ಟಿಎಂಸಿ ನೀರು ಸಮುದ್ರ ಸೇರುತ್ತಿದೆ. ಟ್ರಿಬ್ಯೂನಲ್ ಯಾವ ಆದೇಶವನ್ನೂ ನೀಡದಿರುವಾಗ ಗೋವಾ ಸಿಎಂ ಹೇಳಿಕೆ ನೀಡಿ ಜನರನ್ನ ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಆರೋಪಿಸಿದರು. 

ಗೋವಾ ಮುಖ್ಯಮಂತ್ರಿಗಳು 1 ಟಿಎಂಸಿ ನೀರು ಕೊಡುವುದಾಗಿ ಹೇಳಿದ್ದಾರೆ, ಫೆಬ್ರವರಿ 6 ರಿಂದ ವಿಚಾರಣೆ ಆರಂಭವಾಗಲಿದೆ. ಈ ಬಗ್ಗೆ ಟ್ರಿಬ್ಯೂನಲ್ ನಲ್ಲಿ ಪ್ರಶ್ನೆ ಮಾಡಲಾಗುವುದು. ಕರ್ನಾಟಕದ ಜನರನ್ನು ಮೂರ್ಖರನ್ನಾಗಿ ಮಾಡುವುದನ್ನು ಗೋವಾ ಸರ್ಕಾರ ಬಿಡಬೇಕು. ಗೋವಾ ಸರ್ಕಾರದ ನಾಟಕವನ್ನು ನಾವು ಬಯಲು ಮಾಡುತ್ತೇವೆ ಎಂದಿದ್ದಾರೆ.

ಕಾನೂನು ಹಾಗೂ ಜನರಿಗೆ ಬಿಜೆಪಿ ರಾಜ್ಯಾಧ್ಯಕ್ಷರ ಹಾಗೂ ಗೋವಾ ನಾಟಕವನ್ನು ತಿಳಿಸುತ್ತೇವೆ. ಮಿಸ್ ಲೀಡಿಂಗ್ ಮಾಡುವುದನ್ನು ಗೋವಾ ಸರ್ಕಾರ ಬಿಡಬೇಕು. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ನೀರು ಕೊಡಲು ಬರಲ್ಲ ಅಂತಾ ಮೊದಲು ಗೋವಾ ಹೇಳಿದೆ. ಇದೀಗ ಇನ್ ಬೇಸ್ ಪ್ರದೇಶಕ್ಕೆ ಮಾತ್ರ ನೀರು ಕೊಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಗೋವಾ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಜನವರಿ 16 ಒಳಗಾಗಿ ಈ ಬಗ್ಗೆ ಟ್ರಿಬ್ಯೂನಲ್ ಗೆ ಪತ್ರ ಬರೆಯುತ್ತೆವೆ ಎಂದು ತಿಳಿಸಿದರು.

ನಾಡಕರ್ಣಿ ಅವರ ಹೇಳಿಕೆ ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ. ಆಗಸ್ಟ್ನಲ್ಲಿ ಟ್ರಿಬ್ಯೂನಲ್ ತೀರ್ಪು ಬರಲಿದೆ. ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ತೀರ್ಪು ಬರುವ ಮೊದಲೇ ಈ ವಿಷಯವನ್ನು ಯಡಿಯೂರಪ್ಪ ಯಾಕೆ ಪ್ರಸ್ತಾಪ ಮಾಡಿದ್ದಾರೆ ಗೊತ್ತಿಲ್ಲ. ಬಿಜೆಪಿಯವರು ರಾಜಕೀಯ ಮಾಡಲು ಈ ವಿಷಯ ಪ್ರಸ್ತಾಪ ಮಾಡಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

M.B.Patil Mahdayi ರಾಜಕೀಯ ನಾಡಕರ್ಣಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ