ಮಹಿಳೆ ಮೇಲೆ ಅತ್ಯಾಚಾರ-ಕೊಲೆ ಯತ್ನ

Rape and attempt to murder

05-01-2018

ಬೆಂಗಳೂರು: ಪ್ರೀತಿಸಿ ಮದುವೆಯಾಗುತ್ತೆನೆಂದು ಪತಿಯಿಂದ ದೂರವಾಗಿದ್ದ ಮಹಿಳೆಯನ್ನು ನಂಬಿಸಿ ಯಾದಗಿರಿಯಿಂದ ನಗರಕ್ಕೆ ಕರೆತಂದು ಅತ್ಯಾಚಾರವೆಸಗಿ ಗುಪ್ತಾಂಗಕ್ಕೆ ಬರೆ ಹಾಕಿ ಕೊಲೆ ಮಾಡಲು ಯತ್ನಿಸಿರುವ ಹೀನ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

ಕಂಟೋನ್ಮೆಂಟ್ ಬಳಿ ಯಾದಗಿರಿ ತಾಲ್ಲೂಕಿನ ವರ್ಕನಳ್ಳಿ ಮೂಲದ ವಿವಾಹಿತ ಮಹಿಳೆ ತಿಮ್ಮವ್ವ(40) ಅವರ ಮೇಲೆ ಅತ್ಯಾಚಾರ ನಡೆಸಿ ಕೊಲೆಯತ್ನ ನಡೆಸಿ ಯಾದಗಿಯ ಕೋಯಿಲೂರ ಗ್ರಾಮದ ದೇವಪ್ಪ (35) ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿರುವ ಯಾದಗಿರಿ ನಗರ ಪೊಲೀಸರು ಪರಾರಿಯಾಗಿರುವ ಆರೋಪಿ ದೇವಪ್ಪನಿಗಾಗಿ ತೀವ್ರ ಶೋಧ ನಡೆಸಿದ್ದು ಆತನ ಪೋಷಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

ವಿವಾಹವಾಗಿ 10 ವರ್ಷ ಕಳೆದಿದ್ದು ಪತಿಯಿಂದ ದೂರವಾಗಿದ್ದ ಸಂತ್ರಸ್ತೆಯು ದನ ಕಾಯಲು ಹೋದಾಗ ಆರೋಪಿ ನಡುವೆ 6 ತಿಂಗಳ ಹಿಂದೆ ಪರಿಚಯವಾಗಿ ಇವರಿಬ್ಬರ ನಡುವೆ ಪ್ರೀತಿ ಶುರುವಾಗಿ ಮದುವೆ ಆಗುವ ಹಂತ ತಲುಪಿತ್ತು. ಸಂತ್ರಸ್ತೆ ಹೇಗಿದ್ದರೂ ಗಂಡನಿಂದ ದೂರುವಿದ್ದೇನೆ ಎಂದು ಮದುವೆಗೆ ಒಪ್ಪಿಕೊಂಡಿದ್ದಾರೆ. ಆದರೆ ದೇವಪ್ಪನ ಮನೆಯಲ್ಲಿ ತಿಮ್ಮವ್ವರನ್ನು ಮದುವೆ ಮಾಡಿಕೊಳ್ಳಲು ವಿರೋಧ ವ್ಯಕ್ತಪಡಿಸಿದ್ದಾರೆ.

ತಿಮ್ಮವ್ವ ವಯಸ್ಸಿನಲ್ಲಿ ದೊಡ್ಡವರು ಎಂಬ ಕಾರಣಕ್ಕೆ ಮದುವೆ ಬೇಡ ಎಂದು ದೇವಪ್ಪನ ತಂದೆ ನಿರಾಕರಿಸಿದ್ದಾರೆ. ಮನೆಯವರ ವಿರೋಧವನ್ನು ಲೆಕ್ಕಿಸದೇ ಇವರಿಬ್ಬರು ಒಂದು ತಿಂಗಳ ಹಿಂದೆ ಮದುವೆ ಮಾಡಿಕೊಂಡು ಜೀವನಸಾಗಿಸಲು ನಗರಕ್ಕೆ ಬಂದಿದ್ದಾರೆ.

ಮೊದಲೇ ದೇವಪ್ಪನ ಪೋಷಕರು ನಗರಕ್ಕೆ  ಕಂಟೋನ್ಮಂಟ್‍ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಅಲ್ಲಿ ವಾಸವಾಗಿದ್ದು ಅವರ ಜೊತೆಗೆ ಬಂದ ಇವರಿಬ್ಬರೂ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದರು. ಆದರೆ ಜನವರಿ 1 ರಂದು ದೇವಪ್ಪ ಮಹಿಳೆಯನ್ನು ಗೃಹ ಬಂಧನಲ್ಲಿಟ್ಟಿದ್ದು, ಜನವರಿ 2 ರಂದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇನ್ನು ದೇವಪ್ಪನ ಪೋಷಕರು ಹಾಗೂ ಸಂಬಂಧಿಕರು ಸೇರಿ ಮಹಿಳೆಯ ಗುಪ್ತಾಂಗ ಹಾಗೂ ತೊಡೆ ಭಾಗದಲ್ಲಿ ಬರೆ ಎಳೆದಿದ್ದು, ಆಕೆಯನ್ನು ಸುಟ್ಟು ಹಾಕಲು ಯತ್ನಿಸಿದ್ದಾರೆ.

ಈ ಬಗ್ಗೆ ಮಹಿಳೆ ಸಂಬಂಧಿಕರಿಗೆ ಮಾಹಿತಿಯನ್ನು ನೀಡಿದ್ದು ಕೂಡಲೇ ನಗರಕ್ಕೆ ಬಂದ ಸಂಬಂಧಿಕರು ತಿಮ್ಮವ್ವನನ್ನು ರಕ್ಷಿಸಿ ಯಾದಗಿರಿಗೆ ಕರೆದುಕೊಂಡು ಹೋಗಿದ್ದಾರೆ. ಗುಪ್ತಾಂಗದ ಬಳಿ ಆದ ಗಾಯವನ್ನು ಹೇಳಿಕೊಳ್ಳಲು ಆಗದೇ ನರಳಾಡುತ್ತಿದ್ದ ಆಕೆಯನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನೀಡುತ್ತಿದ್ದ ವೈದ್ಯರು ನೀಡಿದ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿರುವ ಯಾದಗಿರಿ ನಗರ ಪೊಲೀಸರು ನಗರಕ್ಕೆ ಧಾವಿಸಿ ಆರೋಪಿಗಳ ಪತ್ತೆಗೆ ಶೋಧ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rape Harassment ವಿವಾಹಿತ ಗೃಹ ಬಂಧನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ