‘ಸಿದ್ದರಾಮಯ್ಯ ಸರಕಾರ ನಡೆಯುತ್ತಿಲ್ಲ ಮಲಗಿದೆ’05-01-2018

ಬಳ್ಳಾರಿ: ಬಳ್ಳಾರಿಯಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳಿಧರ್ ಪಾಲ್ಗೊಂಡು, ಈ ವೇಳೆ ತೆಲುಗಿನಲ್ಲಿ  ಮಾತುಗಳನ್ನು ಪ್ರಾರಂಭಿಸಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಸರಕಾರ ನಿದ್ದೆ ಮಾಡುತ್ತಿದೆ, ಜನರ ಹಣ ಖರ್ಚು ಮಾಡಿಕೊಂಡು ಸಮಾವೇಶ ಮಾಡುತ್ತಿದ್ದಾರೆ, ಸರಕಾರದ ಹಣದಲ್ಲಿ ಜಾಹಿರಾತು ನೀಡುತ್ತಾ ಸರಕಾರದ ಸಾಧನೆ ಎಂದು ಹೇಳಿಕೊಂಡು ಹಣ ಪೋಲು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ಸರಕಾರ ನಡೆಯುತ್ತಿಲ್ಲ, ಮಲಗಿದೆ ಎಂದು ವ್ಯಂಗ್ಯವಾಡಿದ್ದಾರೆ. ರಾಜ್ಯದಲ್ಲಿ ಹಿಂದೂ ಯುವಕರ ಹತ್ಯೆ ಮಾಡಲಾಗುತ್ತಿದೆ, ರಾಜ್ಯದ ಗೃಹ ಸಚಿವ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.

ಅಯ್ಯಾ ದೀಪಕ್ ರಾವ್ ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಅಂದಿದ್ದೆ ತಪ್ಪಾಯ್ತಾ, ಕರ್ನಾಟವನ್ನು ಪಾಕಿಸ್ತಾನ ಮಾಡಲು ಹೊರಟಿದೆ ರಾಜ್ಯ ಸರ್ಕಾರ, ಇಂತಹ ಸರಕಾರ ಒಂದು ಕ್ಷಣ ಅಸ್ತಿತ್ವದಲ್ಲಿರುವ ಅವಕಾಶವಿಲ್ಲ, ಬಿಜೆಪಿ ದೇಶಕ್ಕಾಗಿ ದುಡಿಯುವ ಪಾರ್ಟಿಯಾಗಿದೆ ಎಂದು ಪ್ರಾಧಾನಿ ಮೋದಿಯನ್ನು ಹಾಡಿ ಹೊಗಳಿದ ಮುರುಳಿಧರ್ ರಾವ್, ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ