ಮಹಿಳೆಯಿಂದ ಯುವಕನಿಗೆ ಕಪಾಳ ಮೋಕ್ಷ

A young man beaten by women on road

05-01-2018

ಬೆಂಗಳೂರು: ಅಪಘಾತಕ್ಕೆ ಕಾರಣನಾದ ನಿವೃತ್ತ ಡಿಫೆನ್ಸ್ ಅಧಿಕಾರಿಯ ಪುತ್ರನಿಗೆ ನಡುರಸ್ತೆಯಲ್ಲಿ ಮಹಿಳೆಯೊಬ್ಬರು ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆ ಫ್ರೇಜರ್ ಟೌನ್‍ನ ಲಿಂಗರಾಜಪುರಂ ಮೇಲುಸೇತುವೆ ಬಳಿ ನಡೆದಿದೆ.

ಬೈಕ್‍ನಲ್ಲಿ ತೆರಳುತ್ತಿದ್ದ ನಿವೃತ್ತ ಸೇನಾಧಿಕಾರಿಯೊಬ್ಬರ ಪುತ್ರ ಇಬ್ರಾಹಿಂ ಬಾಷಾಗೆ ಮಹಿಳೆ ಹೊಡೆದಿದ್ದಾರೆ. ಸಂಚಾರ ಪೊಲೀಸರು ಅಡ್ಡಹಾಕಿದ ಪರಿಣಾಮ ಇಬ್ರಾಹಿಂ ಏಕಾಏಕಿ ಆಗಿ ಬೈಕ್ ನಿಲ್ಲಿಸಿದ್ದರು. ಈ ವೇಳೆ ಬೈಕ್ ಗೆ ಹಿಂಬದಿಯಿಂದ ಬರುತ್ತಿದ್ದ ಕಾರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಕಾರು ಚಾಲಕನನ್ನು ಇಬ್ರಾಹಿಂ ಪ್ರಶ್ನಿಸಿದ್ದಾರೆ. ಈ ವೇಳೆ ಕಾರ್ ನಲ್ಲಿದ್ದ ಮಹಿಳೆ ಇಬ್ರಾಹಿಂ ಕಾಲರ್ ಹಿಡಿದು ಕಪಾಳಮೋಕ್ಷ ಮಾಡಿದ್ದಾರೆ. ನಂತರ ಕಾರಿನಲ್ಲಿದ್ದವರು ಕೂಡ ಇಬ್ರಾಹಿಂಗೆ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. ಈ ಬಗ್ಗೆ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

accident defence ಹಿಗ್ಗಾ-ಮುಗ್ಗಾ ಪೊಲೀಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ