ಕಾಂಗ್ರೆಸ್-ಬಿಜೆಪಿಗೆ ಎಚ್ಡಿಕೆ ಸವಾಲ್

HDK challanges Congress and BJP

05-01-2018

ಬೆಳಗಾವಿ: ಅನ್ನ ಭಾಗ್ಯ ಇವರದಲ್ಲ, ಪುಕ್ಕಟೆ ಅಕ್ಕಿ ಕೊಡುವುದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲೆಷ್ಟಿದೆ ಎಂದು ಕಾಂಗ್ರೆಸ್ ಸರ್ಕಾರವನ್ನು ಹೆಚ್.ಡಿ.ಕುಮಾರ ಸ್ವಾಮಿಯವರು ಪ್ರಶ್ನಿಸಿದ್ದಾರೆ. ಬೆಳಗಾವಿಯಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ದುಡಿಮೆ ಮೇಲೆ ಮತ ಕೇಳುವ ಕೆಪ್ಯಾಸಿಟಿ ಕಾಂಗ್ರೆಸ್ಸಿಗಿಲ್ಲ. ಜಾತಿಗಳ ಮೇಲೆ ಮತ ಕೇಳ್ತಾರೆ ಎಂದು ಆರೋಪಿಸಿದ್ದಾರೆ. 

ಸಿಎಂ ಸಿದ್ದರಾಮಯ್ಯ ಪ್ರತಿ ಕಾರ್ಯಕ್ರಮದಲ್ಲಿ ಅವರಪ್ಪನ ಮೇಲೆ ಆಣೆ ಅವರು ಸರ್ಕಾರ ರಚಿಸಲ್ಲ ಅಂತ ಹೇಳ್ತಾರೆ. ನಮ್ಮಪ್ಪಂದಿರೇನು ಇವರಿಗೆ ಬಿಟ್ಟಿ ಸಿಕ್ಕಿದ್ದಾರಾ, ಬೇಕಾದ್ರೆ ಸಿಎಂ ಅವರಪ್ಪನ ಮೇಲೆ ಆಣೆ ಹಾಕೊಳ್ಳಿ ಎಂದು ಗರಂ ಆದರು.

ಮುಖ್ಯಮಂತ್ರಿ ಸ್ಥಾನದ ಘನತೆ ಗೌರವ ಕಡೆಮೆ ಮಾಡಬೇಡಿ, ರಾಜ್ಯ ಸರ್ಕಾರಕ್ಕೆ ಏನಾದ್ರು ಜವಾಬ್ದಾರಿ ಇದೆಯೇ? ದೀಪಕ್ ಹತ್ಯೆ ವಿಚಾರ ಕರಾವಳಿಯಲ್ಲಿ ಯಾಕೆ ಈ ರೀತಿ ಗಲಾಟೆಗಳಾಗುತ್ತಿವೆ, ಎಲ್ಲ ಕಡೆಯೂ ಮುಸ್ಲೀಮರಿದ್ದಾರೆ, ಆದರೇ ಕರಾವಳಿಯಲ್ಲೇ ಯಾಕೆ ಗಲಾಟೆಗಳಾಗುತ್ತಿವೆ ಎಂದು ಪ್ರಶ್ನಿಸಿದ್ದಾರೆ.

ಎರಡು ಪಕ್ಷಗಳು ಈ ಪ್ರಕರಣವನ್ನು ಮುಂದಿಟ್ಟುಕೊಂಡು, ರಾಜಕೀಯ ಮಾಡುತ್ತಿದ್ದಾರೆ. ಸಮಾಜ ಘಾತುಕ ಶಕ್ತಿಗಳಿಗೆ ಇವರೇ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ. ಕಾಂಗ್ರೆಸ್-ಬಿಜೆಪಿ ಎರಡು ಒಂದೆ ನಾಣ್ಯದ ಎರಡು ಮುಖಗಳು. ಎರಡು ರಾಷ್ಟ್ರೀಯ ಪಕ್ಷಗಳ ಜೊತೆ ಕೈ ಜೊಡಿಸಿದರೆ ರಾಜ್ಯದ ರೈತರ 50 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಲಿಕ್ಕೆ ಆಗೋದಿಲ್ಲ. ಅದಕ್ಕಾಗಿ ನಾವು 113ರ ಗುರಿ ಇಟ್ಟುಕೊಂಡು ಹೋಗುತ್ತಿದ್ದೇವೆ ಎಂದರು.

ನೀವು ಸಣ್ಣ ಪುಟ್ಟ ಪ್ರತಿಭಟನೆಗಳನ್ನ ಮಾಡಬೇಡಿ. ನಿಮ್ಮ ಪ್ರತಿಭಟನೆಗಳಿಂದ ಗೋಲಿಬಾರ್ಗಳಾಗಬೇಕು ಎಂದು, ಅಮೀತ್ ಷಾ ಹೇಳಿದ್ದಾರೆ ಅನ್ನೊ ಪ್ರತಾಪ್ ಸಿಂಹ ಹೇಳಿಕೆ ವೈರಲ್ ಆಗಿದೆ. ಇದೇ ಹೇಳಿಕೆಯನ್ನು ಸಾಮಾನ್ಯ ಪ್ರಜೆ ಹೇಳಿದ್ದರೆ, ಯಾವೆಲ್ಲ ಸೆಕ್ಷನ್ಗಳನ್ನ ಹಾಕಿ ಒಳಗೆ ಹಾಕುತ್ತಿದ್ದರು. ಆದರೆ ಈಗ ಯಾಕೆ ಸುಮ್ಮನಿದ್ದೀರಿ ಎಂದು ಕುಮಾರ ಸ್ವಾಮಿ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ನವರೇ ನೀವು ಜೆಡಿಎಸ್ ಪಕ್ಷದಲ್ಲಿ ಡಿಸಿಎಂ ಆಗಿ ಕೆಲಸ ಮಾಡಿದ್ದೀರಿ, ಆವಾಗ ಜೆಡಿಎಸ್ ಅಪ್ಪ ಮಕ್ಕಳ ಪಕ್ಷ ಎಂದು ಗೊತ್ತಿರಲಿಲ್ವಾ. ಬಹಳ ಹಗುರವಾಗಿ ಮಾತನಾಡಬೇಡಿ ಎಂದು ಸಿಎಂಗೆ ಹೆಚ್ಡಿಕೆ ಚಾಟಿ ಬೀಸಿದ್ದಾರೆ.

ಮಹದಾಯಿ ವಿಚಾರದಲ್ಲಿ ಮಾಜಿ ಪಿಎಂ ದೇವೆಗೌಡರು ಎರಡು ಬಾರಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಜನರಿಗಾಗಿ ನಾವೇನು ಮಾಡಿದ್ದಿವಿ, ಕಾಂಗ್ರೆಸ್-ಬಿಜೆಪಿಯವರು ಏನ್ ಮಾಡಿದ್ದಾರೆ ಅನ್ನೋ ಓಪನ್ ಡಿಬೇಟ್ಗೆ ಒಂದೇ ವೇದಿಕೆಯಲ್ಲಿ ಎರಡು ಪಕ್ಷದವರು ಬರಲಿ ಎಂದು ಕುಮಾರ ಸ್ವಾಮಿ ಅವರು ಸವಾಲೆಸೆದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

H.D.Kumaraswamy Anna Bhagya ಮಹದಾಯಿ ಡಿಬೇಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ