ಬಳ್ಳಾರಿಯ ಹೊಸಪೇಟೆ ಬಂದ್

Bellary Hospet Bandh

05-01-2018

ಬಳ್ಳಾರಿ: ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ನೀಡಿರುವ, ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ  ಪ್ರಗತಿಪರ ಸಂಘಟನೆಗಳು ಇಂದು ಹೊಸಪೇಟೆ ಬಂದ್ ಕರೆ ನೀಡಿದ್ದು, ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಹಿನ್ನೆಲೆ ಸಾರ್ವಜನಿಕರ ಓಡಾಟ, ವಾಹನಗಳ ಸಂಚಾರವಿಲ್ಲದೇ ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿವೆ. ಜನರಿಲ್ಲದೇ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಮಾರುಕಟ್ಟೆ ಖಾಲಿ-ಖಾಲಿಯಾಗಿದೆ. ಇನ್ನು ಬಂದ್ ಮಾಹಿತಿ ಇಲ್ಲದೆ ಹಂಪಿ ಪ್ರವಾಸಕ್ಕೆ ಬಂದ ಪ್ರವಾಸಿಗರು ಬಸ್ ಸಿಗದೆ ಪರದಾಡುವಂತಾಗಿದೆ. ನಗರದಲ್ಲಿ ಆಟೋ, ಖಾಸಗಿ, ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದೆ.


ಸಂಬಂಧಿತ ಟ್ಯಾಗ್ಗಳು

Bellary Bandh ಸರ್ಕಾರಿ ಬಸ್ ಖಾಲಿ-ಖಾಲಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ