‘ರಾಮಲಿಂಗಾ ರೆಡ್ಡಿ ಬೇಜವಾಬ್ದಾರಿ ಗೃಹ ಸಚಿವ’

yeddyurappa questioning Ramalinga Reddy on deepak rao issue

05-01-2018

ಬಳ್ಳಾರಿ: ಮುಂದಿನ ದಿನಗಳಲ್ಲಿ ದೀಪಕ್ ರಾವ್ ಅವರ ತಾಯಿಯನ್ನು ಭೇಟಿ ಮಾಡಿ ಸಾಂತ್ವನ ಹೇಳುತ್ತೇನೆ, ರಾಮಲಿಂಗಾ ರೆಡ್ಡಿ ಅವರು ಬಿಜೆಪಿ ಮೇಲೆ ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದು, ಬಿ.ಎಸ್.ಯಡಿಯೂರಪ್ಪ, ರಾಮಲಿಂಗಾರೆಡ್ಡಿ ವಿರುದ್ಧ ಕಿಡಿಕಾರಿದ್ದಾರೆ. ಬಳ್ಳಾರಿಯಲ್ಲಿಂದು ಮಾತಾನಡಿದ ಬಿಎಸ್ ವೈ, ರಾಮಲಿಂಗಾ ರೆಡ್ಡಿಯವರೇ ತಕ್ಷಣ ಕೋಮುವಾದಿ ಸಂಘಟನೆಗಳನ್ನು ನಿಷೇಧ ಮಾಡಿ ಎಂದು ಆಗ್ರಹಿಸಿದ್ದಾರೆ. ದೀಪಕ್ ಹತ್ಯೆಯನ್ನು ಎನ್ಐಗೆ ವಹಿಸಲು ರಾಜನಾಥ್ ಸಿಂಗ್ ರವರನ್ನು ಭೇಟಿ ಮಾಡಿ ಮನವರಿಕೆ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಹಿಂದೂ ಕಾರ್ಯಕರ್ತರ ಹತ್ಯೆಗಳಾಗುತ್ತಿವೆ, ನೀವೇನು ಮಾಡುತ್ತಿದ್ದಿರಾ, ನೀವೇಕೆ ದೀಪಕ್ ರವರ ಶವವನ್ನು ಆಸ್ಪತ್ರೆಯಿಂದ ತಂದಿರಿ ಎಂದು ಪ್ರಶ್ನಿಸಿದ್ದಾರೆ.

ರಾಮಲಿಂಗಾ ರೆಡ್ಡಿ ಬೇಜವಾಬ್ದಾರಿ ಗೃಹ ಸಚಿವ,  ಕರ್ನಾಟಕವನ್ನು ಕೇರಳವನ್ನಾಗಿಸಲು ಈ ಸರ್ಕಾರ ಹೊರಟಿದೆ ಎಂದು ದೂರಿದರು. ಇನ್ನು ಗಾಲಿ ಜನಾರ್ಧನ ರೆಡ್ಡಿಯವರನ್ನು ಪಕ್ಷಕ್ಕೆ ಕರೆದುಕೊಳ್ಳುವ ವಿಚಾರದ ಕುರಿತು, ಇದರ ಬಗ್ಗೆ ನಾನು ಮಾತನಾಡಲ್ಲ. ಇದು ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು, ಅವರೇ ನಿರ್ಧಾರ ಮಾಡುತ್ತಾರೆ ಎಂದರು.

ಅಲ್ಲದೇ ಆನಂದ್ ಸಿಂಗ್ ಕೂಡ ಎಲ್ಲೂ ಹೋಗಲ್ಲ, ಅವರು ನಮ್ಮೊಂದಿಗೆ ಪಕ್ಷದೊಂದಿಗೆ ಇರುತ್ತಾರೆ. ನಾಳೆ ನಡೆಯುವ ಹೊಸಪೇಟೆ ಯಾತ್ರೆಯಲ್ಲಿ ಅವರು ಪಾಲ್ಗೊಳ್ಳುತ್ತಾರೆ. ದೂರವಾಣಿ ಮೂಲಕ ಮಾತನಾಡಿದ್ದೇನೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಬಂದರೆ ನೀರಾವರಿ ಯೋಜನೆಗಳನ್ನು ಅಭಿವೃದ್ಧಿ ಪಡಿಸಲು 1000 ಕೋಟಿ ನೀಡುತ್ತೇವೆ. ಕೆರೆಗಳನ್ನು ತುಂಬಿಸುವ ಯೋಜನೆಗಳಿಗೆ ಮೊಟ್ಟಮೊದಲು ಅಧ್ಯತೆ ನೀಡುತ್ತೇವೆ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

yeddyurappa Ramalinga Reddy ಗೃಹ ಸಚಿವ ಆನಂದ್ ಸಿಂಗ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ