‘ಮಹಾರಾಷ್ಟ್ರ ಒತ್ತಡದಿಂದ ಕಲ್ಲಿದ್ದಲು ಘಟಕ ರದ್ದು’

DK Shivakumar allegation on maharashtra govt

05-01-2018

ಬೆಂಗಳೂರು: ಕೇಂದ್ರ ಸಚಿವ ಪೀಯೂಷ್ ಗೋಯಲ್ ಸಂಸತ್ ನಲ್ಲಿ ಕಲ್ಲಿದ್ದಲು ಪೂರೈಕೆ ವಿಚಾರ ಚರ್ಚೆ ಬಂದಾಗ ರಾಜ್ಯ ಸಚಿವ ಡಿ.ಕೆ.ಶಿವಕುಮಾರ್ ಚರ್ಚಿಸಿಲ್ಲ ಎಂದು ಆರೋಪಿಸಿದ್ದು, ಇದು ಸುಳ್ಳು, ಪ್ರತಿ ಹಂತದಲ್ಲೂ ಸಮನ್ವಯತೆ ಕಾಯ್ದುಕೊಂಡಿರುವೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಲ್ಲಿದ್ದಲು ಪೂರೈಕೆ ರದ್ದಾದ ಬಳಿಕ ನಮ್ಮ ಸಂಸತ್ ಸದಸ್ಯರನ್ನು ಕರೆದು ಚರ್ಚಿಸಲಾಗಿದೆ. ಕಲ್ಲಿದ್ದಲು ಘಟಕ ತೆರೆಯಬೇಕಾದಾಗ ಕರ್ನಾಟಕ, ಮಹಾರಾಷ್ಟ್ರ ಅನುಮತಿ ಸಿಕ್ಕಿತ್ತು, ಈ ವಿಚಾರವಾಗಿ ಪಾರದರ್ಶಕತೆ ಕಾಯಲು ರಾಜ್ಯ ಒಪ್ಪಿತ್ತು ಎಂದು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಬಳಿ ಟೆಂಡರ್ ಹಾಕಲು ಅನುಮತಿ ಕೇಳದ್ದೀವಿ, ಟೆಂಡರ್ ಗೆ ಸುಪ್ರೀಂ ಕೋರ್ಟ್ ನಿಂದ ಅನುಮತಿ ಸಿಕ್ಕಿಲ್ಲ, ಆದರೆ ಮಹಾರಾಷ್ಟ್ರ ಒತ್ತಡ ಹಿನ್ನೆಲೆಯಲ್ಲಿ ಕಲ್ಲಿದ್ದಲು ಘಟಕ ಒಪ್ಪಂದ ರದ್ದು ಮಾಡೊ ನೋಟೀಸ್ ಕೇಂದ್ರದಿಂದ ಬಂದಿದೆ ಎಂದು ದೂರಿದ್ದಾರೆ.

ಕಲ್ಲಿದ್ದಲು ಪೂರೈಕೆ ವಿಚಾರವಾಗಿ ಕೇಂದ್ರದ ಬಳಿ ಹಲವು ಬಾರಿ ಚರ್ಚಿಸಿದ್ದೀವಿ, ಸಿಎಂ, ಕೆ.ಎಸ್ ಮುನಿಯಪ್ಪ ಹಾಗೂ ನಾನು, ಈ ವಿಚಾರವಾಗಿ ಚರ್ಚಿಸಲು ಕಾಯ್ದು ಕುಳಿತಿದ್ದೆವು, ಪ್ರಧಾನಿ ಕಚೇರಿ ಕೆಲಸ ಅಂತ ಹೇಳಿ 1ಗಂಟೆ ಕಾಯ್ದಿದ್ದೇವೆ ಎಂದು ಹೇಳಿದ್ದಾರೆ. ಅದಲ್ಲದೇ ಸಿಎಂ, ನಾನು 5 ಪತ್ರ ಬರೆದಿದ್ದೀವಿ ಯಾವುದಕ್ಕೂ ಉತ್ತರ ಸಿಕ್ಕಿಲ್ಲ. ಇಲಾಖಾ ವತಿಯಿಂದ 55 ಮನವಿ ನೀಡಲಾಗಿದೆ ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ