ವಾಟ್ಸಾಪ್‌ ನಿಂದ ರೆಕಾರ್ಡ್ ಬ್ರೇಕ್…

watsapp new record...

04-01-2018

ನೀವು ವಾಟ್ಸಾಪ್ ಬಳಸ್ತೀರಾ? ರೀ ಏನ್ರೀ ಹೀಗ್ ಕೇಳ್ತೀರಾ? ಈ ಜಗತ್ತಿನಲ್ಲಿ ಯಾರಾದ್ರೂ ವಾಟ್ಸಾಪ್ ಮತ್ತು ಫೇಸ್ ಬುಕ್ ಬಳಸ್ದೇ ಇರೋರಿದ್ದಾರ ಅಂತೀರಾ? ಬಳಸದೇ ಇರೋರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ, ಆದರೆ ಬಳಸೋರ ಸಂಖ್ಯೆ ತುಂಬಾ ಹೆಚ್ಚಾಗ್ತಾಹೋಗ್ತಿದೆ ಅನ್ನೋದ್ ಮಾತ್ರ ಸತ್ಯ.

ಈ ಬಾರಿ, ಹೊಸ ವರ್ಷದ ಸಂದರ್ಭದಲ್ಲಿ ವಾಟ್ಸಾಪ್‌ ಮೂಲಕ ನಮ್ಮ ಜಗತ್ತಿನ ಜನ ಎಷ್ಟು ಶುಭಾಶಯ ಕಳಿಸಿರಬಹುದು ಊಹೆ ಮಾಡಿ. ಉಹೂಂ ಈ ಸಂಖ್ಯೆ ನಿಮ್ಮ ಊಹೆಗೆ ಮೀರಿದ್ದಾಗಿದೆ. ಹೊಸ ವರ್ಷದ ವೇಳೆಯಲ್ಲಿ ಒಂದೇದಿನ ಒಟ್ಟಾರೆ 7,500 ಕೋಟಿ ವಾಟ್ಸಾಪ್ ಸಂದೇಶಗಳು ವಿನಿಮಯ ಆಗಿದ್ದು, ಇಲ್ಲಿಯವರೆಗಿನ ಎಲ್ಲ ದಾಖಲೆಗಳನ್ನು ಅಳಿಸಿಹಾಕಿದೆ. ಈ ವಾಟ್ಸಾಪ್ ಸಂದೇಶಗಳಲ್ಲಿ  1300 ಕೋಟಿ ಇಮೇಜ್‌ಗಳು ಮತ್ತು 500 ಕೋಟಿ ವಿಡಿಯೋಗಳೂ ಸೇರಿವೆ. ವಾಟ್ಸಾಪ್ ಸಂದೇಶಗಳನ್ನು ಕಳಿಸುವುದರಲ್ಲಿ ಭಾರತೀಯರು ಸಾಕಷ್ಟು ಮುಂದಿದ್ದು, ಹೊಸವರ್ಷದಂದು ಭಾರತದಲ್ಲಿ 2 ಸಾವಿರ ಕೋಟಿಗೂ ಹೆಚ್ಚು ವಾಟ್ಸಾಪ್ ಸಂದೇಶಗಳನ್ನು ಕಳಿಸಲಾಗಿದೆ. 

ಫೇಸ್‌ ಬುಕ್ ಸಂಸ್ಥೆ ಮಾಲೀಕತ್ವದ ವಾಟ್ಸಾಪ್‌ನಲ್ಲಿ ಕಳೆದ ವರ್ಷ ಫೆಬ್ರವರಿಯಿಂದ ಶುರುವಾದ ‘ಸ್ಟೇಟಸ್’ ಹಾಕುವ ಆಟವಂತೂ ಭಾರಿ ಜನಪ್ರಿಯವಾಗಿದೆ. 24 ಗಂಟೆಯ ನಂತರ ಮಾಯವಾಗುವ ಈ ಸ್ಟೇಟಸ್ ಸೌಲಭ್ಯವನ್ನು 30 ಕೋಟಿ ಜನರು ಬಳಸುತ್ತಿದ್ದು, ತಮ್ಮ ದಿನ ನಿತ್ಯದ ಆಟ, ನೋಟ, ಬೊಂಬಾಟ ಇತ್ಯಾದಿಗಳನ್ನು ಜಗತ್ತಿನ ಮುಂದೆ ಪ್ರದರ್ಶನಕ್ಕಿಡುತ್ತಿದ್ದಾರೆ.

ಸದ್ಯಕ್ಕೆ, ವಿಶ್ವದಲ್ಲಿ 130 ಕೋಟಿ ಜನ ಸಕ್ರಿಯ ವಾಟ್ಸಾಪ್‌ ಬಳಕೆದಾರರಿದ್ದಾರಂತೆ. ಇದು, ಜಗತ್ತಿನ ಜನಸಂಖ್ಯೆಯ ಸುಮಾರು ಆರನೇ ಒಂದು ಭಾಗದಷ್ಟು ಅನ್ನಬಹುದು. ಹೊಸ ವರ್ಷದ ಆರಂಭದ ಸಂದರ್ಭದಲ್ಲಿ ಸುಮಾರು ಒಂದು ಗಂಟೆ ಕಾಲ ವಾಟ್ಸಾಪ್ ಕೆಲಸ ಮಾಡಲಿಲ್ಲ, ಹೀಗಿದ್ದರೂ ಕೂಡ, ಇಷ್ಟೊಂದು ಸಂದೇಶಗಳು ಹರಿದಾಡಿರುವುದನ್ನು ಗಮನಿಸಿದರೆ, ವಾಟ್ಸಾಪ್ ಜನಪ್ರಿಯತೆ ಎಷ್ಟರಮಟ್ಟಿಗಿದೆ ಅನ್ನುವುದು ಗೊತ್ತಾಗುತ್ತದೆ.


ಸಂಬಂಧಿತ ಟ್ಯಾಗ್ಗಳು

watsapp New year ಜನಸಂಖ್ಯೆ ವಾಟ್ಸಾಪ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Wish u all of the best
  • Meeranatha.m
  • Hotel manegement