ಕಾಫಿ ಡೇಯಲ್ಲಿ ಅಕ್ರಮ ಬಹಿರಂಗ!

Illegal Disclosure on Coffee Day!

11-09-2020 594

ಕಾಫಿ ಡೇ ಮಾಲೀಕ ವಿ ಜಿ ಸಿದ್ಧಾರ್ಥ ಸಾವು ದೇಶದಲ್ಲಿ ಮಾತ್ರವಲ್ಲದೆ ವಿಶ್ವದ ಆರ್ಥಿಕ ವಲಯದಲ್ಲೂ ಸುದ್ದಿಯಾಗಿತ್ತು. ಸಿದ್ದಾರ್ಥ ಅವರ ಸಾವಿಗೆ ಅನೇಕ ಕಾರಣಗಳನ್ನು ಮುಂದಿಡಲಾಗಿತ್ತಾದರೂ ಮುಖ್ಯವಾಗಿ ತೆರಿಗೆ ಅಧಿಕಾರಿಗಳ ಒತ್ತಡ ಮತ್ತು ಅವರು ನೀಡಿದ ಮಾನಸಿಕ ಹಿಂಸೆಯೂ ಮುಖ್ಯ ಕಾರಣವಾಗಿತ್ತು ಎನ್ನಲಾಗಿತ್ತು. ಆದರೆ ಈಗ ತನಿಖೆಯ ಫಲಿತಾಂಶ ಹೊರಬಂದಿದ್ದು ಆದಾಯ ತೆರಿಗೆ ಅಧಿಕಾರಿಗಳು ದೋಷಮುಕ್ತರು ಎನ್ನಲಾಗಿದೆ. ಆದರೆ ಸಿದ್ದಾರ್ಥ ಅವರು ಕಾಫಿ ಡೇ ಕಂಪನಿಯಿಂದ ತಮ್ಮ ಸ್ವಂತ ಮಾಲೀಕತ್ವದ ಕಂಪನಿಗೆ ಸುಮಾರು 3500 ಕೋಟಿ ರೂಪಾಯಿಯಷ್ಟನ್ನು ಅಕ್ರಮವಾಗಿ ವರ್ಗಾಯಿಸಿದ್ದರು ಎಂಬ ಮಾಹಿತಿ ಹೊರಬಂದಿದೆ.

ಕಾಫಿ ಡೇ ಒಂದು ಸಾರ್ವಜನಿಕವಾಗಿ ವಹಿವಾಟಿಗಿದ್ದ ಕಂಪೆನಿಯಾಗಿದ್ದರೂ ಅದರಿಂದ ಹಣವನ್ನು ತಮ್ಮ ಸ್ವಂತ ಮಾಲೀಕತ್ವದ ಖಾಸಗಿ ಕಂಪನಿಗೆ ವರ್ಗಾಯಿಸಿ ಕಾಫಿ ಡೇಗೆ ನಷ್ಟವಾಗುವುದಕ್ಕೆ ಕಾರಣರಾದರು ಎಂಬ ಮಾಹಿತಿ ಹೊರಬಂದಿದೆ. ಆ ಹಣವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಹೇಳಲಾಗಿದೆ. ಸಿದ್ಧಾರ್ಥ ಅವರ ಖಾಸಗಿ ಮಾಲೀಕತ್ವದ ಮೈಸೋರ್ ಅಮಾಲ್ಗಮೇಟೆಡ್ ಕಾಫಿ ಎಸ್ಟೇಟ್ಸ್ ಸಂಸ್ಥೆ ಕಾಫಿ ಡೇ ಎಂಟರ್ಪ್ರೈಸಸ್ ಕಂಪನಿಗೆ ಹಣವನ್ನು ಹಿಂದಿರುಗಿಸುವುದಕ್ಕೆ ಸೂಕ್ತ ವಿಧಾನವನ್ನು ಕಂಡುಕೊಳ್ಳಲಾಗುವುದು ಎಂದೂ ಹೇಳಲಾಗಿದೆ. ಹಾಗೆ ಅಕ್ರಮವಾಗಿ ಕಾಫಿ ಡೇ ಇಂದ ಹೊರತೆಗೆದ ಹಣವನ್ನುಸಿದ್ದಾರ್ಥ ಅವರು ತಮ್ಮ ವಯಕ್ತಿಕ ಅವಶ್ಯಕತೆಗಳು ಮತ್ತು ಸಾಲ ಮರುಪಾವತಿಯೊಂದಿಗೆ ಬಡ್ಡಿ ನೀಡಲೂ ಬಳಸಿರಬಹುದು ಎಂದೂ ಊಹಿಸಲಾಗಿದೆ. ಈ ಮಾಹಿತಿಯನ್ನು ಸಿಬಿಐನ ಇನ್ಸ್ಪೆಕ್ಟರ್ ಜನರಲ್ ಅಶೋಕ್ ಕುಮಾರ್ ಮಲ್ಹೋತ್ರ ಬಹಿರಂಗಪಡಿಸಿದ್ದಾರೆ.   

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ