ಚಂಪಾರಣ್ಯ ಸತ್ಯಾಗ್ರದ 100 ವರ್ಷದ ಸ್ಮರಣಾರ್ಥ ಬಿಹಾರದ ಮುಖ್ಯಮಂತ್ರಿ ಪಾದಯಾತ್ರೆ

Kannada News

18-04-2017

ನವದೆಹಲಿ : ಚಂಪಾರಣ್ಯ ಸತ್ಯಾಗ್ರದ 100 ವರ್ಷದ ಸ್ಮರಣಾರ್ಥ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬೃಹತ್ ಪಾದಯಾತ್ರೆಯನ್ನ ಕೈಗೊಂಡಿದ್ದರು..ಚಂದ್ರಹಿಯದಿಂದ ಆರಂಭಗೊಂಡ ಪಾದಯಾತ್ರೆ ಪಶ್ಚಿಮ ಚಂಪಾರಣ್ಯದ ಗಾಂಧಿ ಮೈದಾನದ ವರೆಗೂ ಹಮ್ಮಿಕೊಳ್ಳಲಾಗಿತ್ತು..

1917, ದೇಶದ ಸ್ವಾತಂತ್ರ್ಯ ಆಂದೋಲನ ಬೀಜಾರ್ಪಣೆಗೊಂಡ ವರ್ಷ. ಮಹಾತ್ಮನಾಗಿರದ ಮೋಹನದಾಸ್ ಕರಮಚಂದ ಗಾಂಧಿ ಮಹಾತ್ಮನಾಗುವತ್ತ ಇಟ್ಟ ಮೊದಲ ಹೆಜ್ಜೆಯ ವರ್ಷವಾಗಿತ್ತು. ನೂರು ವರ್ಷಗಳ ಹಿಂದೆ ಬಿಹಾರ ರಾಜ್ಯದ ಚಂಪಾರಣ್ಯ ಜಿಲ್ಲೆಯಲ್ಲಿ ಇಂಗ್ಲಿಷ್‌  ಭೂಮಾಲೀಕರಿಂದ ರೈತರಿಗಾಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಲೇ ರೈತರನ್ನೂ ಮತ್ತು ಸುತ್ತಲಿನ ಜನರನ್ನೂ ಸಬಲೀಕರಣಗೊಳಿಸುತ್ತ, ಎಲ್ಲರನ್ನೂ ಸುಧಾರಣೆಯತ್ತ ಒಯ್ಯುವ ಕೆಲಸವನ್ನು ಗಾಂಧಿಜೀ ಮಾಡಿದ್ದರು. ಈ ಚಂಪಾರಣ್ಯ ಸತ್ಯಾಗ್ರಹವನ್ನು ಸ್ಮರಿಸುವ ಉದ್ದೇಶದಿಂದ ಈ ಪಾದಯಾತ್ರೆಯನ್ನ ನಿತೀಶ್ ಕುಮಾರ್ ಕೈಗೊಂಡಿದ್ದರು. 

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ