ಕೆಂಪೇಗೌಡ ಪ್ರತಿಮೆ ಬಗ್ಗೆ ಅಸಮಾಧಾನ

Disgusted with the Kempegowda statue

11-09-2020 407

ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ಸರ್ಕಾರ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆ ಸ್ಥಾಪನೆಗೆ ಭೂಮಿ ಪೂಜೆ ಮಾಡಿದೆ. ಇದರ ಮಧ್ಯೆ ಈ ಪ್ರತಿಮೆ ಮತ್ತು ಸ್ಮಾರಕ ನಿರ್ಮಾಣಕ್ಕೆ ಸರ್ಕಾರದ ಬದಲು ವಿಮಾನ ನಿಲ್ದಾಣ ಸಂಸ್ಥೆಯೇ ಹಣ ಖರ್ಚು ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ಆದರೆ ಕೋವಿಡ್ ನಿಂದ ಕರ್ನಾಟಕ ರಾಜ್ಯ ಬಳಲಿರುವ ಈ ಸಮಯದಲ್ಲಿ ಮತ್ತು ಸೂಕ್ತ ಚಿಕಿತ್ಸೆಗೆ ಸರ್ಕಾರ ವ್ಯವಸ್ಥೆ ಮಾಡಲು ಸಾಧ್ಯವಾಗದೆ ಹಣದ ಮುಗ್ಗಟ್ಟನ್ನು ಅನುಭವಿಸ್ತುತ್ತಿರುವ ಪರಿಸ್ಥಿತಿಯಲ್ಲಿ ಈ ಪ್ರತಿಮೆ ಸ್ಥಾಪನೆಯಂಥ ಕೆಲಸಕ್ಕೆ ಕೈ ಹಾಕಿರುವುದು ಜನರಿಗೆ ಕಿರಿ ಕಿರಿ ಉಂಟುಮಾಡಿದೆ. ಈ ಅಭಿಪ್ರಾಯ ಎಲ್ಲಾ ಕಡೆ ಮೂಡಿ ಬರುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ ಪ್ರತಿಕ್ರಯಿಸಿದವರ ಪೈಕಿ ಶೇಖಡಾ ೭೦ ರಷ್ಟು ಮಂದಿ ಈ ಪ್ರತಿಮೆ ನಿರ್ಮಾಣಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ, ಮಾತ್ರವಲ್ಲದೆ ಕೆಲವರು ಇಂಥಾ ದುಂದುವೆಚ್ಚದ ಅಗತ್ಯವಿದೆಯಾ ಎಂದೂ ಕೇಳಿದ್ದಾರೆ. ಈ ಪ್ರತಿಮೆ ಸ್ಥಾಪನೆಯಲ್ಲಿ ಕೆಂಪೇಗೌಡರ ಬಗೆಗಿನ ಪ್ರೀತಿ ಮತ್ತು ಗೌರವಕ್ಕಿಂತ ಹೆಚ್ಚ್ಚಾಗಿ ಜಾತಿ ರಾಜಕಾರಣದ ವಾಸನೆ ಹೆಚ್ಚಾಗಿ ಕಂಡುಬರುತ್ತಿರುವುದು ಪ್ರಜ್ಞಾವಂತ ನಾಗರಿಕರಲ್ಲಿ ಜಿಗುಪ್ಸೆ ಮೂಡಿಸಿದೆ. ಕೆಂಪೇಗೌಡರ ಬಗ್ಗೆ ಗೌರವ ಎಲ್ಲರಿಗೂ ಇದೆ ಆದರೆ ಅವರಿಗೆ ಗೌರವ ಸಲ್ಲಿಸಲು ಅನೇಕ ಬೇರೆ ವಿಧಾನಗಳಿವೆ, ಈ ಪ್ರತಿಮೆ ಸ್ಥಾಪನೆಯ ಚಾಳಿಯನ್ನು ಸರ್ಕಾರಗಳು ನಿಲ್ಲಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಅಗತ್ಯ ಸೌಲಭ್ಯಗಳನ್ನು ಪೂರೈಸಲು ಹೆಣಗಾಡುವ ಸರ್ಕಾರಕ್ಕೆ ಈ ಎಲ್ಲಾ ದುಸ್ಸಾಹಸಗಳಿಗೆ ದುಡ್ಡು ಎಲ್ಲಿಂದ ಬಂತು ಎಂದೂ ಜನ ಕೇಳುತ್ತಿದ್ದರೆ. ಜನರ ಅಭಿಪ್ರಾಯವನ್ನು ಕಡೆಗಣಿಸಿ ಜನರಿಗಾಗಿ ಎಂಬಂತೆ ಹೀಗೆ ದುಂದುವೆಚ್ಚ ಮಾಡಲು ಹೊರಟಿರುವ ಸರ್ಕಾರಕ್ಕೆ ಏನು ಮಾಡಬೇಕು ಎಂದು ಜನ ಅಸಹಾಯಕತೆಯಿಂದ ಕೇಳುತ್ತಿದ್ದಾರೆ.
 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ