‘ತುಘಲಕ್ ದರ್ಬಾರ್ ಮೂರ್ನಾಲ್ಕು ತಿಂಗಳಷ್ಟೇ’04-01-2018 972

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜನ ಕಾಂಗ್ರೆಸ್ ಸರ್ಕಾರದ ಬಗ್ಗೆ ಬೇಸತ್ತಿದ್ದಾರೆ, ಸಿದ್ದರಾಮಯ್ಯ ಮನೆಗೆ ಹೋಗಬೇಕು, ಯಡಿಯೂರಪ್ಪ ಅಧಿಕಾರಕ್ಕೆ ಬರಬೇಕು, ನಾವು ಜಾತಿ ವಾದಿಗಳಲ್ಲ ಎಂದಿದ್ದಾರೆ.  ಈ ಹಿಂದೆ ಭಾಗ್ಯ ಲಕ್ಷ್ಮಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಫಲ ಸಿಕ್ಕಿದೆ, ಅಲ್ಪಸಂಖ್ಯಾತ ಬಂಧುಗಳೆ ನಿಮ್ಮೊಂದಿಗೆ ಮೋದಿ ಇದ್ದಾರೆ, ನಾವುಗಳಿದ್ದೇವೆ. ನಾವು ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರನ್ನೂ ಸಮಾನವಾಗಿ ನೋಡುತ್ತೇವೆ. ಸಿದ್ದರಾಮಯ್ಯನವರೇ ನೀವುಗಳೇ ಧರ್ಮಗಳನ್ನು ಒಡೆದು ಆಳುತ್ತಿದ್ದಿರೀ ಎಂದು ಆರೋಪಿಸಿದ ಅವರು, ಸಿದ್ದರಾಮಯ್ಯ ನವರೆ ನಿಮಗೆ ತಾಕತ್ ಇದ್ದರೆ ದೀಪಕ್ ಸೂರಿಂಜೆ ಹತ್ಯೆ ಪ್ರಕರಣ ಎನ್ಐಎ ತನಿಖೆಗೆ ವಹಿಸಿ ಎಂದು ಸವಾಲೆಸೆದಿದ್ದಾರೆ.

ಗೋವಾದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಕರ್ನಾಟಕಕ್ಕೆ ನೀರು ಬಿಡಲ್ಲ ಎಂದು ಹೇಳಿದ್ದು, ನಿಮ್ಮ ಸೋನಿಯ ಗಾಂಧಿ. ನಮಗೆ ಒಂದು ಹನಿ ಮಹದಾಯಿ ನೀರು ಬೇಡ ಎಂದು ಪತ್ರ ಬರೆದುಕೊಟ್ಟಿದ್ದು ನೀವು ಸಿದ್ದರಾಮಯ್ಯ ನವರೇ, ಮಹದಾಯಿ ನೀರಿನ ಪ್ರಕರಣ ನಿಮ್ಮ ಪಾಪದ ಕೂಸು ರೀ, ಇನ್ನೂ ಮೂರ್ನಾಲ್ಕು ತಿಂಗಳು ನಿಮ್ಮ ತುಘಲಕ್ ದರ್ಬಾರ್ ಮಾಡಿ, ನಂತರ ಜನರು ನಿಮಗೆ ಬುದ್ಧಿ ಕಲಿಸುತ್ತಾರೆ ಎಂದು ಟೀಕಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ