ಎಚ್ಡಿಕೆಗೆ ಸಿದ್ದರಾಮಯ್ಯ ಟಾಂಗ್

Siddaramaiah vs kumaraswamy

04-01-2018

ಹಾಸನ: ಎತ್ತಿನಹೊಳೆ ಯೋಜನೆಗೆ ನಮ್ಮ ಸರಕಾರ ಚಿಕ್ಕಬಳ್ಳಾಪುರದಲ್ಲಿ ಚಾಲನೆ ನೀಡಿತ್ತು, ಆಗ ಜೆಡಿಎಸ್ನಿಂದ ಶಾಸಕ ಶಿವಲಿಂಗೇಗೌಡರು ಮಾತ್ರ ಬಂದಿದ್ದರು ಎಂದು, ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಪ್ರಸ್ತುತ ಯೋಜನೆಯಲ್ಲಿ ಬೇಲೂರಿಗೂ ಅನುಕೂಲವಾಗುತ್ತಿದ್ದು, 1.32 ಟಿಎಂಸಿ ನೀರು ಅರಸೀಕೆರೆಗೂ ಸಿಗಲಿದೆ, ಅರಸೀಕೆರೆಯಲ್ಲಿ 35 ಕೆರೆಗಳನ್ನು ತುಂಬಿಸಲಿದ್ದೇವೆ ಎಂದ ಅವರು, ಎತ್ತಿನ ಹೊಳೆ ವಿಚಾರದಲ್ಲಿ ಶಿವಲಿಂಗೇಗೌಡರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲಲ್ಲ ಎಂದಿದ್ದಾರೆ.

ನಮ್ಮ ಸರಕಾರದ ಸಾಧನೆಗಳನ್ನು ವಿಪಕ್ಷಗಳು ಒಪ್ಪುವ ಮನೋಧರ್ಮ ತೋರಿಸಲಿ, ಜೆಡಿಎಸ್ನ ಕೆಲವು ನಾಯಕರು ಎತ್ತಿನಹೊಳೆ ಯೋಜನೆಗೆ ವಿರೋಧಿಸುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಎತ್ತಿನಹೊಳೆ ನಿಲ್ಲಿಸ್ತೇವೆ ಅಂತ ಜೆಡಿಎಸ್ ನವರು ಹೇಳುತ್ತಿದ್ದಾರೆ, ಎಂದು ಮಾಜಿ ಸಿಎಂ ಎಚ್ಡಿಕೆಗೆ ಸಿಎಂ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಎತ್ತಿನಹೊಳೆ ಯೋಜನೆಗೆ ನಮ್ಮ ಸರಕಾರ 13 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ, ಎತ್ತಿನಹೊಳೆ ಯೋಜನೆಯಿಂದ 24.1 ಟಿಎಂಸಿ ಅಡಿ ನೀರು ಲಭ್ಯವಾಗಲಿದ್ದು, ನೇತ್ರಾವತಿಯ ನೀರು ಈ ಭಾಗಕ್ಕೆ ಹರಿಸುತ್ತೇವೆ, ಮುನ್ನೂರು ಕೆರೆಗಳನ್ನು ತುಂಬಿಸುತ್ತೇಬವೆ ಎಂದರು.

ಜನಪರ ಯೋಜನೆಗಳ ಬಗ್ಗೆ ತಪ್ಪು ಮಾಹಿತಿ ಕೊಡುವುದು ಶೋಭೆ ಅಲ್ಲ, ಕುಮಾರಸ್ವಾಮಿಯವರಿಗೆ ಈ ವಿಷಯ ಗೊತ್ತಾಗಬೇಕು, 13 ಸಾವಿರ ಕೋಟಿ ಖರ್ಚು ಮಾಡಲು ನಮಗೇನು ಹುಚ್ಚು ಹಿಡಿದಿದೆಯಾ? ಅನೇಕ ತಜ್ಞರ ವರದಿಗಳನ್ನಾಧರಿಸಿಯೇ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲಾಗಿದೆ. ರಾಜಕೀಯ ದೃಷ್ಟಿಯಿಂದ ಎತ್ತಿನಹೊಳೆ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದ್ದು, ಯಾರೆಷ್ಟೇ ವಿರೋಧಿಸಿದರೂ ಎತ್ತಿನಹೊಳೆ ಯೋಜನೆ ಕಾರ್ಯಗತ ಮಾಡುತ್ತೇವೆ, ಯೋಜನೆಯಲ್ಲಿ ಸರ್ಕಾರಕ್ಕೆ ವೈಯಕ್ತಿಕ ಲಾಭ ಏನೂ ಇಲ್ಲ ಎಂದಿದ್ದು, ಏಲಕ್ಕಿ ಬೆಳೆಗಾರರ 6 ಸಾವಿರ ಕೋಟಿ ರೂ.ಮನ್ನಾ ಮಾಡಿದ್ದೇವೆ ಎಂದು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

siddaramaiah election ವಿಪಕ್ಷ ಮನೋಧರ್ಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ