‘ಅಮಿತ್ ಷಾ ಆಟ ಇಲ್ಲಿ ನಡೆಯೋದಿಲ್ಲ’

04-01-2018 268
ತುಮಕೂರು: ತುಮಕೂರಿನ ತುರುವೇಕೆರೆಯಲ್ಲಿ ಇಂದು ನಡೆದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಮ್ಮ ಭಾಷಣದಲ್ಲಿ, ಜೆಡಿಎಸ್ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದರು. ಬಿಜೆಪಿ ಪರಿವರ್ತನಾ ಯಾತ್ರೆಗೆ ನಮ್ಮ ತಕರಾರಿಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ, ನಿರುದ್ಯೋಗ, ರೈತರ ಬಗ್ಗೆ ಬಿಜೆಪಿ ಮಾತನಾಡುತ್ತಿಲ್ಲ, ಕೇವಲ ಕೋಮುಗಲಭೆ ಮಾಡಿ ಹೇಗಾದರೂ ಅಧಿಕಾರ ಹಿಡಿಯಲು ಬಿಜೆಪಿಯವರು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ. ಅಮಿತ್ ಷಾ ರಣನೀತಿ ಬಗ್ಗೆ ನಮಗೆ ಭಯವಿಲ್ಲ, ಅವರ ಆಟ ಇಲ್ಲಿ ನಡೆಯೋದಿಲ್ಲ ಎಂದರು.
ಜನತಾ ದಳದ ಅಜೆಂಡಾ ನನಗೆ ಗೊತ್ತಿಲ್ಲ, ಒಂದು ಕಡೆ ಎತ್ತಿನ ಹೊಳೆ ಯೋಜನೆ ನಿಲ್ಲಿಸುತ್ತೇನೆ, ಅನ್ನಭಾಗ್ಯ ಯೋಜನೆ ನಿಲ್ಲಿಸ್ತಿನಿ ಅಂತಾರೆ ಜೆಡಿಎಸ್ ನವರು, ಬಡವರ ಕಾರ್ಯಕ್ರಮ ನಿಲ್ಲಿಸಲು ಹೊರಟ ಜೆಡಿಎಸ್ ಅಜೆಂಡಾ ಏನೂ.? ಎಂದು ಪರಮೇಶ್ವರ್ ಅವರು ಇಂದಿಲ್ಲಿ ಪ್ರಶ್ನಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ