‘ಅಗತ್ಯವಿದ್ದರೆ ರಾಮಲಿಂಗಾರೆಡ್ಡಿ ಮಂಗಳೂರಿಗೆ’04-01-2018 274

ಶಿವಮೊಗ್ಗ: ಕರಾವಳಿಯಲ್ಲಿ ಹಿಂದು ಯುವಕನ ಹತ್ಯೆ ವಿಷಾದಕರ, ಯುವಕನ ಆತ್ಮಕ್ಕೆ ಶಾಂತಿ ಕೋರುತ್ತೆವೆ ಎಂದು, ಕಂದಾಯ ಸಚಿವ ಹಾಗೂ ಶಿವಮೊಗ್ಗದ ಉಸ್ತುವಾರಿ ಸಚಿವರಾಗಿರುವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ಈ ರೀತಿ ಘಟನೆಗಳು ನಡೆಯಬಾರದು, ತಪ್ಪಿತಸ್ಥರನ್ನು ಶಿಕ್ಷಿಸುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ, ಅವಶ್ಯಕತೆ ಇದ್ದರೆ ಮಂಗಳೂರಿಗೆ ಗೃಹ ಸಚಿವರು ಭೇಟಿ ನೀಡುತ್ತಾರೆ ಎಂದರು.

ಇದೇ ತಿಂಗಳ 6ರಂದು ಸಿಎಂ ಸಿದ್ದರಾಮಯ್ಯನವರು ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ ಹಾಗೂ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಸಾಗರ ವಿಧಾನಸಭ ಕ್ಷೇತ್ರದಲ್ಲಿ 97.54 ಕೋಟಿ ರೂ.ವೆಚ್ಚದಲ್ಲಿ 14 ಕಾಮಗಾರಿಗಳ ಶಂಕುಸ್ಥಾಪನೆ ನಡೆಯಲಿದೆ, 121.65 ಕೋಟಿ.ರೂ ವೆಚ್ಚದ 20 ಕಾಮಗಾರಿಗಳ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು.

ಅದಲ್ಲದೇ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 202 ಕೋಟಿ ರೂ. ವೆಚ್ಚದ 91 ಕಾಮಗಾರಿಗಳು, 9 ಕೋಟಿ ರೂ.ವೆಚ್ಚದ 5 ಕಾಮಗಾರಿಗಳ ಉದ್ಘಾಟನೆ, ಸೇರಿದಂತೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ 275 ಕೋಟಿ ರೂ.ವೆಚ್ಚದ 17 ಕಾಮಗಾರಿಗಳು, 176 ಕೋಟಿ ರೂ.ವೆಚ್ಚದ 6  ಕಾಮಗಾರಿಗಳ ಉದ್ಘಾಟನೆಯೂ ಇದೇ ವೇಳೆ ನಡೆಯಲಿದೆ ಎಂದರು.ಸಂಬಂಧಿತ ಟ್ಯಾಗ್ಗಳು

Kagodu Thimmappa Ramalinga Reddy ಗೃಹ ಸಚಿವ ಕಾಮಗಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ