ಸುರತ್ಕಲ್ ನಲ್ಲಿ ಪೊಲೀಸ್ ಬಿಗಿಭದ್ರತೆ

04-01-2018 255
ಮಂಗಳೂರು: ನಿನ್ನೆ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಅವರ ಅಂತ್ಯ ಸಂಸ್ಕಾರ ಇಂದು ನೆರವೇರಲಿದ್ದು, ಈ ವೇಳೆ ಎಜೆ ಆಸ್ಪತ್ರೆಯಿಂದ ಕಾಟಿಪಳ್ಳದವರೆಗೂ ಶವಯಾತ್ರೆ ಮಾಡಲು, ಬಿಜೆಪಿ ಮತ್ತು ಹಿಂದು ಪರ ಸಂಘಟನೆಗಳ ನಿರ್ಧಾರ ಮಾಡಿವೆ. ಇನ್ನು ಈ ಕುರಿತು ಮಂಗಳೂರು ನಗರದಾದ್ಯಂತ ಇಂದು ಮಧ್ಯರಾತ್ರಿಯವರೆಗೂ ನಿರ್ಬಂಧಕಾಜ್ಞೆಯನ್ನು ಜಾರಿ ಮಾಡಿ, ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇರ್ ಆದೇಶಿಸಿದ್ದಾರೆ. ಅದಲ್ಲದೇ ಹತ್ಯೆ ಖಂಡಿಸಿ ಇಂದು ಸುರತ್ಕಲ್ ಬಂದ್ ಕರೆ ನೀಡಿದ್ದು, ಸುರತ್ಕಲ್ ಸುತ್ತಮುತ್ತ ಪೊಲೀಸರು ಭಾರೀ ಬಿಗಿ ಬಂದೋಬಸ್ತ್ ಮಾಡಿದ್ದಾರೆ. 6 ಕೆ.ಎಸ್.ಆರ್.ಪಿ ತುಕಡಿ ಹಾಗು 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಮಾತನಾಡಿ, ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ, ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ, ಇತರ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ಕೂಡ ಕರೆಸಿಕೊಳ್ಳಲಾಗಿದೆ, ಈಗಾಗಲೇ ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದ್ದು, ದೀಪಕ್ ಅಂತ್ಯಕ್ರಿಯೆಗೂ ಸಂಪೂರ್ಣ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದರು.
ಒಂದು ಕಮೆಂಟನ್ನು ಹಾಕಿ