ಮೂವರು ಟಯರ್ ಕಳ್ಳರ ಬಂಧನ

Arrested 2 tyre thives in bengaluru

03-01-2018

ಬೆಂಗಳೂರು: ವಾಹನಗಳ ನಿಲುಗಡೆ ಪ್ರದೇಶ, ಮನೆಗಳ ಮುಂಭಾಗ ನಿಲ್ಲಿಸಿದ್ದ ಕಾರಿನ ಚಕ್ರಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೊಡುಗೆಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೀವನ್ ಭೀಮಾ ನಗರದ ನರೇಶ್ ಬಾಬು ಅಲಿಯಾಸ್ ನರೇಶ್ (23), ಹಾಸನದ ದಿಂಡಗೂರುವಿನ ಕಾಂತರಾಜು ಅಲಿಯಾಸ್ ಕಾಂತ (22), ಬೇಲೂರಿನ ಸಾಣೇನಹಳ್ಳಿಯ ಮೋಹನ್ ಕುಮಾರ್ ಅಲಿಯಾಸ್ ಮೋಹನ್ (22) ಬಂಧಿತ ಆರೋಪಿಗಳಾಗಿದ್ದಾರೆ ಎಂದು, ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

ಆರೋಪಿಗಳು ಕಳೆದ ಡಿ.31 ರಂದು ರಾತ್ರಿ ಭದ್ರಪ್ಪ ಬಡಾವಣೆ ಬಳಿ ಕಳವು ಮಾಡಿದ ಕಾರಿನ ಚಕ್ರಗಳನ್ನು ಕಾರಿನಲ್ಲಿಟ್ಟುಕೊಂಡು ಪರಾರಿಯಾಗುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಕೊಡಿಗೆಹಳ್ಳಿ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಕೊಡುಗೆಹಳ್ಳಿಯ ಸಹಕಾರ ನಗರ, ಕೆನರಾ ಬ್ಯಾಂಕ್ ಲೇಔಟ್, ಇನ್ನಿತರ ಕಡೆಗಳಲ್ಲಿ ಕಾರಿನ ಚಕ್ರಗಳನ್ನು ಕಳವು ಮಾಡಿದ್ದ 5 ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳನ್ನು ಬಂಧಿಸಿರುವ ಕೊಡುಗೆಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ರಾಜಣ್ಣರವರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

 

 

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ