ಕಾರಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆ

Dead body found in a car

03-01-2018 264

ಬೆಂಗಳೂರು: ನಗರದ ಹೊರವಲಯದ ಮಾಗಡಿಯ ಕೊಂಡಳ್ಳಿ ಬಳಿ ಪಾರ್ಟಿ ಮಾಡಲೆಂದು ಕರೆದೊಯ್ದು ಸ್ನೇಹಿತನನ್ನೇ ಕೊಲೆ ಮಾಡಿ ಶವವನ್ನು ಕಾರಿನಲ್ಲಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ. ಕೊಲೆಯಾದರವರನ್ನು ರಾಮನಗರದ ಪುಟ್ಟರಾಜು(25) ಎಂದು ಗುರುತಿಸಲಾಗಿದೆ. ಪುಟ್ಟರಾಜು ಅವರನ್ನು ರಾತ್ರಿ ಪಾರ್ಟಿ ಮಾಡಲು ಕರೆದೊಯ್ದ ಸ್ನೇಹಿತರು ಮಾಗಡಿಯ ಕೊಂಡಳ್ಳಿ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಬಳಿಕ ತಾವೇ ಪುಟ್ಟರಾಜುವಿನ ಸಹೋದರನಿಗೆ ಕರೆ ಮಾಡಿ, ಕೊಂಡಳ್ಳಿಯ ಬಳಿ ಸ್ವಿಫ್ಟ್ ಕಾರಿನ ಹಿಂಬದಿ ಸೀಟಿನಲ್ಲಿ ಪುಟ್ಟರಾಜುವಿನ ಶವವನ್ನು ಇಟ್ಟಿರುವುದಾಗಿ ತಿಳಿಸಿ ಪರಾರಿಯಾಗಿದ್ದಾರೆ. ಸುದ್ದಿ ತಿಳಿದ ತಕ್ಷಣ ಮಾಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.ಸಂಬಂಧಿತ ಟ್ಯಾಗ್ಗಳು

murder ramanagara ಕೊಲೆ ಸ್ವಿಫ್ಟ್ ಕಾರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ