‘ಅರ್ಜಿ ತಿರಸ್ಕೃತವಾಗಿದ್ದರೆ ಮತ್ತೆ ಸಲ್ಲಿಸಬಹುದು’03-01-2018 295

ಬೆಂಗಳೂರು: ಪಡಿತರ ಚೀಟಿಯ ವಿತರಣೆಯನ್ನು ಆಧುನಿಕ ತಂತ್ರಜ್ಞಾನ ಬಳಸಿ ನೀಡುವ ವ್ಯವಸ್ಥೆ ಉತ್ತಮವಾಗಿ ಜಾರಿಯಾಗಿದೆ ಎಂದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪಡಿತರ ಚೀಟಿಗಾಗಿ 15 ಲಕ್ಷದ 47 ಸಾವಿರ ಜನ ಅರ್ಜಿಗಳು ಬಂದಿದ್ದು, ರೆವಿನ್ಯೂ ಅಧಿಕಾರಿಗಳು ಪರಿಶೀಲಿಸಿ ವಿಲೇವಾರಿ‌ ಮಾಡುತ್ತಿದ್ದಾರೆ, ಈಗಾಗಲೆ 14,92,000 ಅರ್ಜಿಗಳು ಪರಿಶೀಲನೆ ಆಗಿವೆ ಮತ್ತು 13ಲಕ್ಷ ಅರ್ಜಿಗಳು ಜಿಲ್ಲೆಗಳಿಂದ ಇಲಾಖೆಗೆ ಪರಿಶೀಲನೆಗೆ ಮತ್ತೆ ಬಂದಿವೆ, ಅದಲ್ಲದೇ 11 ಲಕ್ಷದ 71 ಸಾವಿರ ಜನರಿಗೆ ಪೋಸ್ಟ್ ಮೂಲಕ ಪಡಿತರ ಚೀಟಿ ತಲುಪಿಸಿದ್ದೇವೆ ಎಂದು ಮಾಹಿತಿ ನೀಡಿದರು. ಸುಮಾರು ಇಪ್ಪತ್ತಾರು ಸಾವಿರ ಅರ್ಜಿಗಳು ತಿರಸ್ಕೃತ ಆಗಿವೆ. ತಿರಸ್ಕೃತವಾದ ಅರ್ಜಿಗಳ ವಿವರಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ, ತಿರಸ್ಕೃತವಾಗಿದ್ದರೂ ಪುನಃ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.

 ಸಂಬಂಧಿತ ಟ್ಯಾಗ್ಗಳು

U.T.Khader Ration card ರೆವಿನ್ಯೂ ವೆಬ್ ಸೈಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ