ಸಿಎಂ ವಿರುದ್ಧ ಆಶೋಕ್ ಗಂಭೀರ ಆರೋಪ

R.Ashok serious allegation on cm siddaramaiah

03-01-2018

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಡಿಸಿಎಂ ಆರ್.ಅಶೋಕ್ ಅವರು ಅಕ್ರಮ ಡಿನೋಟಿಫಿಕೇಶನ್ ಆರೋಪ ಮಾಡಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದು, ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಹಿಂದೆ ಮೈಸೂರು ಅರಸರು ಉದ್ಯಾನವನಕ್ಕೆ ಮೀಸಲಿಟ್ಟ ಜಾಗ, ಸಿಎಂ ಡಿನೋಟಿಫಿಕೇಶನ್ ಮಾಡಿದ್ದಾರೆ,  ಜಯನಗರದ ಮೂರು ಎಕರೆ ಜಮೀನು ಡಿನೋಟಿಫಿಕೇಶನ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜಗದೀಶ್ ಶೆಟ್ಟರ್ ಅವರ ಸರ್ಕಾರ ಇದ್ದಾಗಲು ಅರ್ಜಿ ಬಂದಿತ್ತು, ಆದರೆ ಶೆಟ್ಟರ್ ಅವರು ಅದನ್ನು ಒಪ್ಪಿರಲಿಲ್ಲ, ಆದರೆ ಸಿಎಂ ಸಿದ್ದರಾಮಯ್ಯ ಡಿನೋಟಿಫಿಕೇಶನ್ ಮಾಡಿದ್ದಾರೆ ಎಂದರು.

2014ರಲ್ಲಿ ಸಿದ್ದಾಪುರ ಬಳಿಯಲ್ಲಿ ಸಾರ್ವಜನಿಕ ಅನುಕೂಲಕ್ಕೆ ಇಟ್ಟ ಉದ್ಯಾನವನದ ಜಾಗವನ್ನು ಅಶೋಕ್ ದಾರಿವಾಲ ಎಂಬಾತನಿಗೆ ಡಿನೋಟಿಫೈ ಮಾಡಿದ್ದಾರೆ. ಈ ಪ್ರಕರಣದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಆಗಿದೆ, ಸಿಎಂ ಹಣದ ಆಮಿಷಕ್ಕೆ ಡಿನೋಟಿಫಿಕೇಶನ್ (ರೀಡು) ಮಾಡಿದ್ದಾರೆ ಎಂದು ಆರ್.ಅಶೋಕ್ ಆರೋಪ ಮಾಡಿದ್ದಾರೆ.

ಲಾಲ್ ಬಾಗ್ ಸಿದ್ಧಾಪುರ ಗ್ರಾಮದ ಸರ್ವೇ ನಂಬರ್ 27/1, 28/4, 28/5, 28/6  ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ. ಬಿಡಿಎ ಪ್ಲ್ಯಾನ್ ನಂತೆ ಉದ್ಯಾನವನ ಮತ್ತು ಸಾರ್ವಜನಿಕ ಬಳಕೆಯ ಜಾಗವಾಗಿದೆ, ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ಜಾಗವನ್ನು ಬೇರೆ ಕಾರ್ಯಕ್ಕೆ ಬಳಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶವಿದೆ. ಆದರೂ ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ, ರಿಯಲ್ ಎಸ್ಟೇಟ್ ಏಜೆಂಟ್ ಅಶೋಕ್ ದಾರಿವಾಲಾಗೆ ಏಕೆ ಡಿನೋಟಿಫೈ ಮಾಡಿದ್ದಾರೆ..? ಹಿಂದಿನ ಸಿಎಂಗಳು ರಿಜೆಕ್ಟ್ ಮಾಡಿದ್ದ ಡಿನೋಟಿಫೈ ಅನ್ನು ಸಿದ್ದರಾಮಯ್ಯ ಏಕೆ ಡಿನೋಟಿಫೈ ಮಾಡಿದ್ರು? ಎಂದು ಪ್ರಶ್ನಿಸಿದ್ದಾರೆ.

ಈ ಪ್ರಕರಣದಲ್ಲಿ ಕನಿಷ್ಟ 200ಕೋಟಿ ಅವ್ಯವಹಾರ ಆಗಿದೆ. ಈಗ ಜಾಗದಲ್ಲಿ ವಸತಿ ಸಂಕೀರ್ಣಗಳ ನಿರ್ಮಾಣ ಆಗಿದೆ. ಕೂಡಲೇ ಡಿನೋಟಿಫೈ ರದ್ದುಗೊಳಿಸಲು ಆಗ್ರಹಿಸಿದ್ದಾರೆ. ಅಲ್ಲದೇ ರದ್ದು ಮಾಡುವವರೆಗೂ ಬಿಜೆಪಿಯಿಂದ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ